Bengaluru UrbanFeatured Story

ಮಂಗಳೂರು: ಸ್ಕೂಟರ್ ಸವಾರನ ಮೇಲೆ ಹರಿದ ಕಾರು, ಸವಾರ ಮೃತ್ಯು

ಮಂಗಳೂರು :ಕಾರಿನ ಚಕ್ರದಡಿ ಸಿಲುಕಿ ಸ್ಕೂಟರ್‌ ಸವಾರನೊಬ್ಬ ಮೃತಾಪಟ್ಟಿದ್ದಾನೆ.

ಮೃತಪಟ್ಟವರನ್ನು ಕೌಶಿಕ್ ಎಂದು ಗುರುತಿಸಲಾಗಿದೆ.’ಬಾರೆಬೈಲ್ ಅಡ್ಡರಸ್ತೆ ಕಡೆಯಿಂದ ಎ.ಜೆ ಆಸ್ಪತ್ರೆ ಎದುರುಗಡೆಯಾಗಿ ಕುಂಟಿಕಾನ ಕಡೆಗೆ ಹೋಗುತ್ತಿದ್ದ ಆಟೋರಿಕ್ಷಾಕ್ಕೆ ಸ್ಕೂಟರ್‌ವೊಂದು ಬುಧವಾರ ರಾತ್ರಿ 7.50ರ ಸುಮಾರಿಗೆ ಡಿಕ್ಕಿ ಹೊಡೆದಿತ್ತು. ಈ ವೇಳೆ ಎ.ಜೆ ಆಸ್ಪತ್ರೆಯ ಎದುರಿನ ಬಾರೆಬೈಲ್ ಅಡ್ಡರಸ್ತೆ ಕಡೆಗೆ ಸಾಗಿರುವ ಸರ್ವಿಸ್ ರಸ್ತೆಯಲ್ಲಿ ಹಾದುಬಂದ ಕಾರು ಕೌಶಿಕ್‌ ಅವರ ಮೇಲೆ ಸಾಗಿತ್ತು ಎನ್ನಲಾಗಿದ್ದು ತಲೆಗೆ ಏಟು ಬಿದ್ದ ಅವರನ್ನು ಸಾರ್ವಜನಿಕರು ಎ.ಜೆ ಆಸ್ಪತ್ರೆಗೆ ಕರೆದೊಯ್ದರು. ಅಷ್ಟರಲ್ಲೇ ಅವರು ಮೃತಪಟ್ಟಿದ್ದರು ಎನ್ನಲಾಗಿದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button