Udupi

ಉಡುಪಿ ಮಹಿಷ ದಸರಾಕ್ಕೆ ಅನುಮತಿ ನಿರಾಕರಣೆ: ಪೊಲೀಸರಿಂದ ಸಂವಿಧಾನದ ಮೇಲೆ ಅತ್ಯಾಚಾರ:ಜಯನ್ ಮಲ್ಪೆ

ಉಡುಪಿ:ಅಂಬೇಡ್ಕರ್ ಯುವಸೇನೆ ಆಯೋಜಿಸಿರುವ ಮೂಲನಿವಾಸಿಗಳ ಸಾಂಸ್ಕೃತಿಕ ಹಬ್ಬವಾದ ಮಹಿಷಾ ದಸರಾಕ್ಕೆ ಕಾನೂನು ಸುವ್ಯವಸ್ಥೆಯ ಹಿತದೃಷಿಯ ನೆಪೆಒಡ್ಡಿ ಅನುಮತಿ ನಿರಾಕರಿಸಿರುವುದು ಉಡುಪಿ ಪೋಲೀಸರಿಂದ ಸಂವಿಧಾನದ ಮೇಲೆ ಅತ್ಯಾಚಾರ ಎಂದು ದಲಿತ ಚಿಂತಕ ಹಾಗೂ ಜನಪರ ಹೋರಾಟಗಾರ ಜಯನ್ ಮಲ್ಪೆ ಆರೋಪಿಸಿದ್ದಾರೆ.

2519(1)( ನ್ಯಾಯ,ಸ್ವಾತಂತ್ರ್ಯ,ಸಮಾನತೆ ಮತ್ತು ಸೋದರತ್ವದ ತತ್ವಗಳ ಆಧಾರದ ಮೇಲೆ ರಚಿತವಾಗಿರುವ ನಮ್ಮ ಸಂವಿಧಾನದ ಅನುಛೇದ ರ ಪ್ರಕಾರ ಧರ್ಮ ಪ್ರಚಾರ ಮತ್ತು ಪಾಲನೆಗೆ ಸ್ವತಂತ್ರ ಅವಕಾಶ ಕಲ್ಪಿಸಲಾಗಿದೆ. ಜೊತೆಗೆ ಪ್ರಜೆಗಳಿಗೆ ತನ್ನ ಎ)ವಿಧಿಯಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕೊಟ್ಟಿದೆ ಆದರೂ ಉಡುಪಿ ನಗರ ಠಾಣಾಧಿಕಾರಿ ಮಹಿಷಾ ದಸರಾದ ಮೆರವಣಿಗೆ ಮತ್ತು ಬ್ಯಾನರ್ ಅಳವಡಿಸಲು ಅನುಮತಿ ನಿರಾಕರಿಸಿರುವುದು ಪ್ರಜಾಪ್ರುತ್ವದ ಕಗ್ಗೊಲೆ ಎಂದಿದ್ದಾರೆ.

ದಲಿತರ ಆಸ್ಮಿತೆಯಾಗಿರುವ ಮಹಿಷ ದಸರಾಕ್ಕೆ ಬಹಿರಂಗವಾಗಿ ಬೆದರಿಕೆ ಹಾಕುತ್ತಿರುವವರನ್ನು ಬಂಧಿಸುದನ್ನು ಬಿಟ್ಟು, ಸಂವಿಧಾನ ಬದ್ಧ ದಲಿತರ ಹಕ್ಕನ್ನೇ ಒಸಕಿ ಹಾಕಿರುವ ಪೋಲೀಸರ ವರ್ತನೆ ಯೋತ್ಪಾದಕರಿಗಿಂತ ಮಿಗಿಲಾಗಿರುಮ ಎಂದಿರುವ ಜಯನ್ ಮಲ್ಪೆ, ಉಡುಪಿಯ ಪರ್ಯಾಯ ಮಹೋತ್ಸವಕ್ಕೆ ಉಗ್ರರ ಬೆದರಿಕೆ ಬಂದರೆ ಉಗ್ರರನ್ನು ಮಟ್ಟಹಾಕುತ್ತಿರೋ ಇಲ್ಲಾ ಪರ್ಯಾಯ ಮಹೋತ್ಸವವನ್ನು ನಿಲ್ಲಿಸುವಿರೋ ಎಂದು ಉಡುಪಿ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಗೆ ಜಯನ್ ಮಲ್ಪೆ ಪ್ರಶ್ನಿಸಿದ್ದಾರೆ. ನಾವು ಅಂಬೇಡ್ಕರ್ ಬರೆದ ಸಂವಿಧಾನವನ್ನು ಗೌರವಿಸುವವರು ಕಾನೂನನ್ನು ಎಂದೂ ಕೈಗೆತ್ತಿಕೊಂಡವರಲ್ಲ,ಸೌಹಾರ್ದತೆಯನ್ನು ಬಯಸುವವರು.ನಮ್ಮದೇ ಮನೆಯಂತಿರುವ ಜಿಲ್ಲಾ ಅಂಬೇಡ್ಕರ್ ವನದಲ್ಲಿ ಮಹಿಷನನ್ನು ಸ್ಮರಿಸಿ,ಗೌರವಿಸಿ ಸಾಂಸ್ಕೃತಿಕ ಹಬ್ಬವಾಗಿ ಆಚರಿಸುತ್ತೇವೆ.ಎಂದಿರುವ ಅವರು,ಪೂರ್ವಾಗ್ರಹ ಪೀಡಿತ ಹಿಂದೂ ಧರ್ಮಾಂಧರ ಗೊಡ್ಡು ಬೆದರಿಕೆಗೆ ಅಂಜುವ ಪೋಲೀಸರಿಂದ ಇಲ್ಲಿ ಪ್ರಜಾಪ್ರುತ್ವದ ರಕ್ಷಣೆ ಖಂಡಿತಾ ಅಸಾಧ್ಯ. ನಮ್ಮ ಹಕ್ಕನ್ನು ನಾವೇ ಕಪಾಡಿಕೊಳ್ಳಬೇಕಾದ ಈ ಸರಕಾರಕ್ಕೆ ಸೂಕ್ತ ಸಂದರ್ದಲ್ಲಿ ರಾಜ್ಯದ ದಲಿತರು ಉತ್ತರಿಸುತ್ತಾರೆ ಎಂದಿದ್ದಾರೆ.

ಕೋಮುವಾದಿ,ಜಾತಿವಾದಿಗಳಿಗೆ ಜನರೇ ಬುದ್ಧಿ ಕಲಿಸಲಿದ್ದಾರೆ. ಅಧಿಕಾರವಿದೆಯೆಂದು ದಲಿತ ಸಮುದಾಯವನ್ನು ತುಚ್ಚವಾಗಿ ಕಾಣುವುದು ಅಕ್ಷಮ್ಯ.ಅದಕ್ಕೆ ತಕ್ಕ ಶಾಸ್ತಿ ಮಾಡುವ ಶಕ್ತಿ ದಲಿತ ಸಮುದಾಯಗಳ ಮತದಾರರಿಗಿದೆ ಎಂದಿರುವ ಜಯನ್ ಮಲ್ಪೆ, ಮಹಿಷಾ ದಸರಾಕ್ಕೆ ತಡೆಯೊಡ್ಡುವುದಾಗಿ ಹೇಳಿರುವ ಸಂಘಪರಿವಾರ ಜಾತಿ ಸಂಘರ್ಷಕ್ಕೆ ಎಡೆಮಾಡುವ ಇವರ ದುರ್ವತನೆ, ಗೂಂಡಾಗಿರಿಯಲ್ಲವೇ? ಎಂದು ಪ್ರಶ್ನಿಸಿದ್ದಾರೆ.

10.30ಬಾನುವಾರ ಬೆಳಿಗ್ಗೆ ಕ್ಕೆ ಆದಿವುಡುಪಿಯ ಜಿಲ್ಲಾ ಅಂಬೇಡ್ಕರ್ ವನದಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಜಿಲ್ಲೆಯ ದಲಿತ,ಹಿಂದುಳಿದ ಮತ್ತು ಅಲ್ಪಸಂಖ್ಯಾತರು ಹೆಚ್ಚಿನ ಸಂಖ್ಯೆಯಲ್ಲಿ ಬನ್ನಿ. ಇದು ನಮ್ಮ ಸಂವಿಧಾನ ಬದ್ಧ ಹಕ್ಕು ಎಂದು ಜಯನ್ ಮಲ್ಪೆ,ಅಂಬೇಡ್ಕರ್ ಯುವಸೇನೆಯ ಮುಖಂಡರಾದ ಹರೀಶ್ ಸಲ್ಯಾನ್,ದಯಾನಂದ ಕಪ್ಪೆಟ್ಟು,ಲೋಕೇಶ್ ಪಡುಬಿದ್ರಿ,ಸಂಜೀವ ಬಳ್ಕೂರು,ರಾಮ ಬೈಂದೂರು, ರಮೇಶ್ ಪಾಲ್,ಶಶಿಕಲಾ ತೊಟ್ಟಂ,ಗಣೇಶ್ ನೆರ್ಗಿ ಮುಂತಾದವರು ವಿನಂತಿಸಿದ್ದಾರೆ

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button