
Crime
ತಮಿಳುನಾಡು :ಲಾರಿ-ಕಾರಿನ ಮಧ್ಯ ಭೀಕರ ಅಪಘಾತ : ಒಂದೇ ಕುಟುಂಬದ 7 ಮಂದಿ ಮೃತ್ಯು
ತಮಿಳುನಾಡು : ತಮಿಳುನಾಡಿನ ತಿರುವಣ್ಣಾಮಲೈನ ಅಂತುರು ಬೈಪಾಸ್ ನಲ್ಲಿ ಲಾರಿ ಹಾಗೂ ಕಾರಿನ ಮಧ್ಯ ಭೀಕರ ಅಪಘಾತ ಸಂಭವಿಸಿದ ಪರಿಣಾಮ ಒಂದೇ ಕುಟುಂಬದ 7 ಜನರು ಸಾವನ್ನಪ್ಪಿದ್ದಾರೆ.
ಬೆಂಗಳೂರಿನ ಐಟಿ ಕಂಪನಿ ಉದ್ಯೋಗಿ ಕೃಷ್ಣಗಿರಿಯ ಸತೀಶ್ ಎನ್ನುವವರು ಸೇರಿದಂತೆ 7 ಜನರು ದುರ್ಮರಣ ಹೊಂದಿದ್ದಾರೆ.
ತಮಿಳುನಾಡಿನ ತಿರುವನ್ನಮಲೈಯಿನ ಸಂಗಮ ಬಳಿಯ ಅಂತುರು ಬೈಪಾಸ್ ನಲ್ಲಿ ಈ ದುರ್ಘಟನೆ ಸಂಭವಿಸಿದೆ. ಐಟಿ ಕಂಪನಿಯಲ್ಲಿ ಕೃಷ್ಣಗಿರಿ ಮೂಲದ ಸತೀಶ್ ಎನ್ನುವವರು ಕೆಲಸ ಮಾಡುತ್ತಿದ್ದರು.
ಐಟಿ ಉದ್ಯೋಗಿ ಸತೀಶ್ ಸೇರಿದಂತೆ ಒಂದೇ ಕುಟುಂಬದ ಏಳು ಜನರು ಸಾವನ್ನಪ್ಪಿದ್ದಾರೆ.ಮೃತರ ಕುಟುಂಬಕ್ಕೆ ತಮಿಳುನಾಡು ಸಿಎಂ ಸ್ಟಾಲಿನ್ ತಲಾ ಎರಡು ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ ಎಂದು ಹೇಳಲಾಗುತ್ತಿದೆ.




