Crime

ಚಿತ್ರದುರ್ಗ :ಟಿವಿ ರಿಮೋಟ್ ಗಾಗಿ ಅಣ್ಣ ತಮ್ಮಂದಿರ ಗಲಾಟೆ – ಸಾವಿನಲ್ಲಿ ಅಂತ್ಯ

ಚಿತ್ರದುರ್ಗ: ಟಿವಿ ರಿಮೋಟ್‌ಗಾಗಿ ಅಣ್ಣ-ತಮ್ಮಂದಿರಿಬ್ಬರೂ ಜಗಳ ಆಡುತ್ತಿದ್ದಾರೆ ಎಂದು ಕೋಪಿಸಿ ತಂದೆ ಹಿರಿಮಗನ ಮೇಲೆ ಕತ್ತರಿ ಎಸೆದ ಪರಿಣಾಮ ತೀವ್ರ ರಕ್ತಸ್ರಾವದಿಂದ ಹಿರಿಮಗ ಸಾವನ್ನಪ್ಪಿದ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ.

ಮೃತಪಟ್ಟವನನ್ನು ಹಿರಿಮಗ ಚಂದ್ರಶೇಖರ್ (16) ಎನ್ನಲಾಗಿದೆ. ಮೃತ ಚಂದ್ರಶೇಖರ್ ಹಾಗೂ ತಮ್ಮ ಪವನ್ (14) ರಿಮೋಟ್‌ಗಾಗಿ ದಿನಾ ಗಲಾಟೆ ಮಾಡಿಕೊಂಡಿದ್ದರು.ಯಾವಾಗ್ಲೂ ತಂದೆ ಬುದ್ದಿವಾದ ಹೇಳುತ್ತಿದ್ದರು ಎನ್ನಲಾಗಿದೆ. ಆದರೂ ಗಲಾಟೆ ಮುಂದುವರೆದ ಪರಿಣಾಮ ಸಿಟ್ಟುಗೊಂಡ ತಂದೆ ಲಕ್ಷ್ಮಣ್‌ಬಾಬು ತನ್ನ ಹಿರಿಮಗನಾದ ಚಂದ್ರಶೇಖರ್ ಮೇಲೆ ಕತ್ತರಿ ಎಸೆದು ಹೆದರಿಸಲು ಮುಂದಾಗಿದ್ದಾರೆ. ಹಲವು ದಿನಗಳಿಂದ ಪಾರ್ಶ್ವವಾಯು ಕಾಯಿಲೆಯಿಂದ ಬಳಲುತ್ತಿರುವ ಲಕ್ಷ್ಮಣ್‌ಬಾಬು ಮಕ್ಕಳ ಜಗಳದಿಂದ ಸಿಟ್ಟಿಗೆದ್ದು ಹಿರಿಮಗನ ಕಡೆಗೆ ಕತ್ತರಿ ಎಸೆದಿದ್ದಾರೆ.

ದುರಾದೃಷ್ಟವಶಾತ್ ಕತ್ತರಿ ಏಟು ಬಾಲಕನ ಕಿವಿಯ ಹಿಂಭಾಗಕ್ಕೆ ಜೋರಾಗಿ ಬಿದ್ದ ಪರಿಣಾಮ ತೀವ್ರ ರಕ್ತಸ್ರಾವದಿಂದಾಗಿ ಚಂದ್ರಶೇಖರ್ (16) ಸಾವನ್ನಪ್ಪಿದ್ದಾನೆ. ಮೊಳಕಾಲ್ಮೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button