
Mandya
ಮಂಡ್ಯ: ಸಾಲಬಾಧೆಯಿಂದ ರೈತ ನೇಣಿಗೆ ಶರಣು
ಮಂಡ್ಯ: ಸಾಲಬಾಧೆ ತಾಳಲಾಗದೆ ರೈತನೊಬ್ಬಆತ್ಮಹತ್ಯೆ ಮಾಡಿಕೊಂಡ ಘಟನೆ ಮಲ್ಲನಾಯಕನಕಟ್ಟೆ ಗ್ರಾಮದಲ್ಲಿ ನಡೆದಿದೆ.
ಮೃತಪಟ್ಟ ವ್ಯಕ್ತಿಯನ್ನು ಮಹದೇವ(52)ಎಂದು ಗುರುತಿಸಲಾಗಿದೆ.
ಆಟೊ ಖರೀದಿ ಸೇರಿದಂತೆ ಕೃಷಿ ಖರ್ಚು ಸೇರಿ ಸುಮಾರು ₹4 ಲಕ್ಷ ಸಾಲ ಮಾಡಿದ್ದಾರೆಂದು ಹೇಳಲಾಗಿದೆ. ಸಾಲ ತೀರಿಸಲು ಸಾಧ್ಯವಾಗದೇ ಮನನೊಂದು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.ಈ ಸಂಬಂಧ ಶಿವಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




