ಲೇಡಿಹಿಲ್‌: ಕಾರು ಡಿಕ್ಕಿ,ಯುವತಿ ಮೃತ್ಯು

ಮಂಗಳೂರು:ವೇಗವಾಗಿ ಬಂದ ಕಾರು ರಸ್ತೆಯಲ್ಲಿ ನಡುದು ಕೊಂಡು ಹೋಗುವವರ ಮೇಲೆ ಹರಿದು ಪಾದಚಾರಿ ಯುವತಿಯೊಬ್ಬರು ಮೃತಪಟ್ಟಿದ್ದು, ಇನ್ನೊರ್ವ ಯುವತಿ ಮತ್ತು ಮೂವರು ಬಾಲಕಿಯರು ಗಾಯಗೊಂಡಿದ್ದಾರೆ.

ಮೃತ ಯುವತಿಯನ್ನು ರೂಪಶ್ರೀ (23 ಎಂದು ಗುರುತಿಸಲಾಗಿದೆ .
ಈ ಅಪಘಾತದಲ್ಲಿ ಯುವತಿ ಸ್ವಾತಿ (26) ಹಾಗೂ ಬಾಲಕಿಯರಾದ ಹಿತ್ನವಿ (16), ಕೃತಿಕಾ (16) ಹಾಗೂ ಯತಿಕಾ (12) ಗಾಯಗೊಂಡಿದ್ದಾರೆ’ ಎನ್ನಲಾಗಿದೆ.

‘ಮೂವರು ಬಾಲಕಿಯರು ಹಾಗೂ ಇಬ್ಬರು ಯುವತಿಯರು ಪಾದಚಾರಿ ಮಾರ್ಗದಲ್ಲಿ ಬುಧವಾರ ಸಂಜೆ ನಡೆದು ಹೋಗುತ್ತಿದ್ದರು. ಚಾಲಕ ಕಮಲೇಶ್‌ ಬಲದೇವ್‌ (57) ಅವರು ಅಜಾಗರೂಕತೆಯಿಂದ ವಾಹನವನ್ನು ಚಲಾಯಿಸಿದ್ದರು. ಯುವತಿಯರು ಹಾಗೂ ಬಾಲಕಿಯರಿಗೆ ಕಾರು ಡಿಕ್ಕಿ ಹೊಡೆದರೂ, ಚಾಲಕ ಕಾರನ್ನು ನಿಲ್ಲಿಸದೇ ಅಲ್ಲಿಂದ ಮುಂದಕ್ಕೆ ಚಲಾಯಿಸಿಕೊಂಡು ಪರಾರಿಯಾಗಿದ್ದ’ ಎಂದು ಪೊಲೀಸರು ತಿಳಿಸಿದ್ದಾರೆ.

Latest Indian news

Popular Stories