
ಉಡುಪಿ: ಚಿನ್ನ ನಾಪತ್ತೆ ಪ್ರಕರಣದಲ್ಲಿ ಮಹಿಳೆಯರ ಮೇಲೆ ಹಲ್ಲೆ ಆರೋಪ – ಪತ್ರಿಕಾಗೋಷ್ಠಿ
ಉಡುಪಿ, ಅ.18: ಮನೆಯೊಂದರಲ್ಲಿ ಚಿನ್ನ ನಾಪತ್ತೆೆ ಪ್ರಕರಣಕ್ಕೆೆ ಸಂಬಂಧಿಸಿ ಮನೆ ಕೆಲಸ ಮಾಡುವ ಮಹಿಳೆಯರ ಮೇಲೆ ಕೋಟ ಪೊಲೀಸರು ಹಲ್ಲೆೆ ನಡೆಸಿ, ಅವಾಚ್ಯ ಶಬ್ಧಗಳಿಂದ ನಿಂದಿಸಿ ದೌರ್ಜನ್ಯ ಎಸಗಿದ್ದಾಾರೆ ಎಂದು ದಸಂಸ ಜಿಲ್ಲಾಾ ಪ್ರಧಾನ ಸಂಚಾಲಕ ಸುಂದರ್ ಮಾಸ್ತರ್ ಬುಧವಾರ ಪತ್ರಿಿಕಾಗೋಷ್ಠಿಿಯಲ್ಲಿ ಆರೋಪಿಸಿದರು.
ಅ.2ರಂದು ನೂಜಿ ಗ್ರಾಾಮದ ಕಿರಣ್ ಕುಮಾರ್ ಶೆಟ್ಟಿಿ ಮನೆಯಲ್ಲಿ ಹುಟ್ಟು ಹಬ್ಬದ ಪ್ರಯುಕ್ತ ಸಚ್ಛತಾ ಕೆಲಸಕ್ಕೆೆ ಆಶಾ ಮತ್ತು ಸುಜಾತಾ ಅವರನ್ನು ಕರೆಸಿಕೊಂಡಿದ್ದರು. ಈ ವೇಳೆ ಮನೆಯಲ್ಲಿ ಚಿನ್ನದ ಕೈ ಖಡ ಕಳೆದುಹೋಗಿರುವ ಬಗ್ಗೆೆ ಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದು, ಅದರಂತೆ ಕೋಟ ಠಾಣೆ ಪಿಎಸ್ಐ ಸುಧಾ ಪ್ರಭು ಅವರು ಆಶಾ ಮತ್ತು ಸುಜಾತಾ ಅವರನ್ನು ಠಾಣೆಗೆ ಕರೆಸಿ ಅವಾಚ್ಯ ಶಬ್ಧಗಳಿಂದ ಗದರಿದ್ದಾಾರೆ. ಪಿಸ್ತೂಲ್ನ್ನು ಹಣೆಗೆ ಇಟ್ಟು ಚಿತ್ರಹಿಂಸೆ ನೀಡಿದ್ದಾಾರೆ ಎಂದು ಆರೋಪಿಸಿದರು.
ರಾತ್ರಿಿ 9.30ವರೆಗೂ ಪೊಲೀಸ್ ಠಾಣೆಯಲ್ಲಿ ಮಹಿಳೆಯರನ್ನು ಕೂರಿಸಿದ್ದಾಾರೆ. ಠಾಣೆಗೆ ಬಂದಿದ್ದ ಕಿರಣ್ ಕುಮಾರ್ ಶೆಟ್ಟಿಿ ಪೊಲೀಸರ ಎದುರಲ್ಲಿಯೇ ಮಹಿಳೆಯರನ್ನು ಉದ್ದೇಶಿಸಿ ಜಾತಿ ನಿಂದನೆ ಮಾಡಿದ್ದಾಾರೆ. ಪೊಲೀಸರು ಕಿರಣ್ ಶೆಟ್ಟಿಿಯ ಮನೆಗೂ ಮಹಿಳೆಯರನ್ನು ಕರೆದುಕೊಂಡು ಹೋಗಿ ಕಾಲಿನ ಪಾದಗಳಿಗೆ ಲಾಠಿಯಿಂದ ಹಲ್ಲೆೆ ನಡೆಸಿದ್ದಾಾರೆ ಎಂದರು. ಮನೆಗೆ ಕಳುಹಿಸುವಾಗ ಪೊಲೀಸರು ನಮಗೆ ಕಿರುಕುಳ ನೀಡಿಲ್ಲ ಎಂದು ಒತ್ತಾಾಯಿಸಿ ಮಹಿಳೆಯರಿಂದ ವೀಡಿಯೊ ಮಾಡಿಸಿಕೊಂಡಿದ್ದಾಾರೆ. ಸುಜಾತ ವರು ಹಲ್ಲೆೆಯಿಂದ ಅಸ್ವಸ್ಥಗೊಂಡು ಕುಂದಾಪುರ ಸರಕಾರಿ ಆಸ್ಪತ್ರೆೆಗೆ ದಾಖಲಾಗಿದ್ದಾಾರೆ. ಅನಂತರ ಹಲ್ಲೆೆಯಿಂದ ಅಸ್ವಸ್ಥವಾಗಿರುವ ಬಗ್ಗೆೆ ವೈದ್ಯರು ವರದಿ ನೀಡಿದ್ದರೂ ಜಿಲ್ಲಾಾ ಪೊಲೀಸ್ ಇಲಾಖೆ ಮೇಲಾಧಿಕಾರಿಗಳು ಸಾಕ್ಷಿಿ ಕೇಳುತ್ತಿಿದ್ದಾಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಎಸ್ಪಿ ಅವರಿಗೆ ಈ ಬಗ್ಗೆೆ ಸಾಕಷ್ಟು ದೂರು ನೀಡಲಾಗಿದೆ. ಆದರೆ ಪೊಲೀಸ್ ಇಲಾಖೆ ಸಾಕ್ಷಿಿ ಕೇಳಿ ನಮಗೆ ನೊಟೀಸ್ ನೀಡುತ್ತಿಿದೆ ಎಂದರು.
ಈ ಅಮಾನವೀಯ ದೌರ್ಜನ್ಯಕ್ಕೆೆ ಸಂಬಂಧಿಸಿ ನ್ಯಾಾಯ ಒದಗಿಸಲು, ಪಿಎಸ್ಐ ಸುಧಾ ಪ್ರಭು ಅವರನ್ನು ಸೇವೆಯಿಂದ ವಜಾಗೊಳಿಸುವಂತೆ ಆಗ್ರಹಿಸಿ ದಲಿತ ಸಂಘರ್ಷ ಸಮಿತಿ, ಸಿಪಿಎಂ ವತಿಯಿಂದ ಅ.28ರಂದು ಕೋಟ ಪೊಲೀಸ್ ಠಾಣೆ ಮುಂಭಾಗ ಬೃಹತ್ ಪ್ರತಿಭಟನೆ ಹಮ್ಮಿಿಕೊಂಡಿದೆ ಎಂದು ಮಾಹಿತಿ ನೀಡಿದರು.
ಸಿಪಿಎಂ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿಿ, ಮುಖಂಡರಾದ ಶ್ಯಾಾಮಸುಂದರ್ ತೆಕ್ಕಟ್ಟೆೆ, ಪರಮೇಶ್ವರ ಉಪ್ಪೂೂರು, ಮಂಜುನಾಥ ಗಿಳಿಯಾರು, ವಾಸುದೇವ ಮುದೂರು, ಶ್ರೀನಿವಾಸ್ ವಡ್ಡರ್ಸೆಮ ವಿಶ್ವನಾಥ್ ಬೆಳ್ಳಂಪಳ್ಳಿಿ, ಸುರೇಶ್ ಹಕ್ಲಾಾಡಿ, ಚಂದ್ರಶೇಖರ್ ಮತ್ತು ಆಶಾ, ಸುಜಾತಾ ಪತ್ರಿಿಕಾಗೋಷ್ಠಿಿಯಲ್ಲಿದ್ದರು.




