ಮೈಸೂರು: ತಾಲ್ಲೂಕಿನ ನಡಹಾಡಿ ಗ್ರಾಮದಲ್ಲಿ ಬುಧವಾರ ಮುಂಜಾನೆ ಬಹಿರ್ದೆಸೆಗೆ ಹೋಗಿದ್ದ ರೈತ ಆನೆ ದಾಳಿಗೆ ಬಲಿಯಾಗಿದ್ದಾರೆ.
ಚಿಕ್ಕೇಗೌಡ (60) ಅವರ ಮೇಲೆ ಕಾಡಾನೆ ದಾಳಿ ನಡೆಸಿದೆ.ಕಾಡಾನೆ ದಾಳಿಯಿಂದಾಗಿ ಅವರ ಕೈ-ಕಾಲು, ಸೊಂಟ ಸೇರಿದಂತೆ ದೇಹದ ಕೆಲ ಭಾಗಗಳು ಮುರಿದು ತೀವ್ರ ಗಾಯಗೊಂಡಿದೆ ಎನ್ನಲಾಗಿದೆ
ಮೃತರ ಪತ್ನಿ ನಾಗಮ್ಮ ಅವರಿಗೆ 4 ವರ್ಷದವರೆಗೆ ₹ 4 ಸಾವಿರ ತಿಂಗಳ ವೇತನದೊಂದಿಗೆ ಕುಟುಂಬದ ಸದಸ್ಯರಿಗೆ ತಾತ್ಕಾಲಿಕವಾಗಿ ಉದ್ಯೋಗ ನೀಡುವಂತೆ ಅರಣ್ಯ ಇಲಾಖೆಗೆ ಸೂಚಿಸಲಾಗಿದೆ