
Crime
ಡಿಕೆಶಿ ಅವರನ್ನು ಅಪರೇಷನ್ ಮಂತ್ರಿ ಎನ್ನಬೇಕು: ನಾರಾಯಣ ಸ್ವಾಮಿ
ಬೆಂಗಳೂರು: ಡಿ.ಕೆ. ಶಿವಕುಮಾರ್ ಅವರನ್ನು ಅಪರೇಷನ್ ಮಂತ್ರಿ ಎನ್ನಬೇಕು ಅಷ್ಟೇ ಉಪಮುಖ್ಯಮಂತ್ರಿ ಎನ್ನಲು ಸಾಧ್ಯವಿಲ್ಲ ಎಂದು ಬಿಜೆಪಿ ಎಂಎಲ್ ಸಿ ಛಲವಾದಿ ನಾರಾಯಣ ಸ್ವಾಮಿ ಹೇಳಿದರು.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅವರಿಗೆ ಕೊಟ್ಟಿರುವ ಸಚಿವ ಸ್ಥಾನ, ಕೆಪಿಸಿಸಿ (kpcc) ಅಧ್ಯಕ್ಷ ಸ್ಥಾನಗಳನ್ನು ನಿಭಾಯಿಸಲು ಆಗದೇ ಅಪರೇಷನ್ ಮಾಡೋಕೆ ಪ್ರತಿ ಬಿಜೆಪಿ, ಜೆಡಿಎಸ್ ಮುಖಂಡರ ಮನೆಗೆ ಸ್ವತಃ ಭೇಟಿ ನೀಡುತ್ತಿದ್ದಾರೆ.
ಪಕ್ಷದಿಂದ ಹೊರ ಹೋಗುವವರಿಗೂ, ಪಕ್ಷಕ್ಕೆ ಬರುವವರಿಗೆ ಸ್ವಾತಂತ್ರ್ಯ ಇದೆ. ಬಿಜೆಪಿ ತೊರೆದಿರುವ ಪೂರ್ಣಿಮಾ ಶ್ರೀನಿವಾಸ್ ಅವರು ನಮ್ಮ ಪಕ್ಷದ ಬಗ್ಗೆ ಯಾವುದೇ ಆಪಾದನೆ ಮಾಡಿಲ್ಲ. ಪಕ್ಷದಲ್ಲಿ ಅವರು ಶಾಸಕರಾಗಿದ್ದವರು. ಅವರ ಮೇಲೆ ನಮ್ಮ ಆಕ್ಷೇಪವೂ ಇಲ್ಲ. ಆದರೆ ಇವರಿಗೆ ಯಾವುದೋ ಒತ್ತಡ ಹಾಕಲಾಗುತ್ತಿದೆ ಎನ್ನುವ ಅನುಮಾನ ಕಾಡುತ್ತಿದೆ. ಇದರಿಂದ ಅವರು ಈ ರೀತಿಯ ನಿರ್ಧಾರಕ್ಕೆ ಬಂದಿರಬಹುದು ಎಂದರು.




