Crime

2024ರಲ್ಲಿ ಮೋದಿ ಸರ್ಕಾರ ಇರಲ್ಲ: ಸಂತೋಷ್‌ ಲಾಡ್‌

ಹುಬ್ಬಳ್ಳಿ: 2024ಕ್ಕೆ ಭಾರತದಲ್ಲಿ ಮೋದಿ ಸರ್ಕಾರ ಇರಲ್ಲ ಬಿಜೆಪಿ ನೆಲಕಚ್ಚುತ್ತೆ ಎಂದು ಸಚಿವ ಸಂತೋಷ್ ಲಾಡ್ ಭವಿಷ್ಯ ನುಡಿದರು.

ನಮ್ಮ ಲೆಕ್ಕಾಚಾರದ ಪ್ರಕಾರ 2024ಕ್ಕೆ ಮೋದಿ ಸರ್ಕಾರ ದೇಶದಲ್ಲಿ ಇರಲ್ಲ. ಯಾರ ಲೆಕ್ಕಾಚಾರ ನಿಜ ಆಗುತ್ತದೆ ಎಂದು ನೋಡೋಣ ಎಂದು ತಿರುಗೇಟು ನೀಡಿದರು.

ಲೋಕಸಭೆ ಚುನಾವಣೆಗೆ ಈಗಾಗಲೇ ಸಿದ್ಧತೆ ನಡೆದಿದೆ.ಈ ಬಾರಿ ಜನರೇ ಬುದ್ದಿ ಕಲಿಸುತ್ತಾರೆ. ಬಿಜೆಪಿ ಹೆಸರೇ ಇರಲ್ಲ. ನಮ್ಮ ಪಕ್ಷದ ಸಿದ್ಧಾಂತ ಒಪ್ಪಿ ಕೆಲವರು ಬರುತ್ತಿದ್ದಾರೆ. ನಮಗೇನೂ ಭಯ ಇಲ್ಲ. ಆದರೆ ಬಿಜೆಪಿ ಬಿಟ್ಟು ಯಾಕೆ ಬರುತ್ತಿದ್ದಾರೆ ಎಂದು ಅವರನ್ನೇ ಕೇಳಿ ಎಂದರು.ನಮ್ಮ ಪಕ್ಷದಲ್ಲಿ ಯಾವ ಅಸಮಾಧಾನ ಇಲ್ಲ. ಬಣಗಳೂ ಇಲ್ಲ. ಸತೀಶ್‌ ಜಾರಕಿಹೊಳಿ ಮತ್ತು ಡಿಕೆ ಶಿವಕುಮಾರ್ ನಡುವೆ ಭಿನ್ನಮತ ಇದೆ ಎನ್ನುವ ತರಹ ನನಗೇನೂ ಅನಿಸುತ್ತಿಲ್ಲ ಎಂದರು

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button