
Vijayapura
17 ಮಂದಿ ಖರೀದಿ ಮಾಡಿದ್ಕೆನೆ ನಿಮ್ಮ ಪ್ರಭಾವ ಹೊಗಿದೆ ಬಿಜೆಪಿಯವರು ನಾಶವಾಗಿ ಹೋಗ್ತೀರಿ: ಸಚಿವ ಎಚ್.ಕೆ.ಪಾಟೀಲ
ವಿಜಯಪುರ: 17 ಶಾಸಕರನ್ನು ಖರೀದಿ ಮಾಡಿ ಬಿಜೆಪಿಯವರು ತೆಗೆದುಕೊಂಡರಲ್ಲ ಆ ಕಾರಣಕ್ಕೆ ಬಿಜೆಪಿ ಇಂದು ದೇಶದಲ್ಲೆ ತನ್ನ ಪ್ರಭಾವ ಕಡಿಮೆ ಮಾಡಿಕೊಂಡಿದೆ ನೀವು ನಾಶವಾಗಿ ಹೋಗುತ್ತೀರಿ ಎಂದು ಸಚಿವ ಎಚ್.ಕೆ.ಪಾಟೀಲ ಬಿಜೆಪಿ ನಾಯಕರ ವಿರುದ್ಧ ಕಿಡಿಕಾರಿದರು.
ವಿಜಯಪುರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕಾರಣ ಅಂದರೆ ಸರ್ಕಾರ ಬೀಳುಸುವುದು ಸರ್ಕಾರ ಮಾಡುವುದು, ಸ್ಥಿರ ಸರ್ಕಾರವನ್ನು ಜಗ್ಗುವುದು, ಶಾಸಕರನ್ನು ಖರೀದಿ ಮಾಡುವುದು ಇದು ರಾಜಕಾರಣನಾ. ಈ ರೀತಿ ಮಾಡುವುದು ಜನರಿಗೆ ಮಾಡುವ ಅವಮಾನ, ಪ್ರಜಾಪ್ರಭುತ್ವಕ್ಕೆ ಮಾಡುವಂತಹ ಮೋಸ, ಜನರು ಈ ರೀತಿ ಮೋಸ ಮಾಡುವುದನ್ನು ಸಹಿಸುವುದಿಲ್ಲ ಎನ್ನುವುದನ್ನು ಬಿಜೆಪಿ ನಾಯಕರು ಅರ್ಥಮಾಡಿಕೊಳ್ಳಬೇಕು ಎಂದರು.




