
Featured StoryKUNDAPURAUdupi
ಕೋಟ: ಆಟವಾಡುತ್ತಿದ್ದ ವೇಳೆ ಗೆಸ್ಟ್ಹೌಸ್ನ ಗೇಟ್ ಬಿದ್ದು ಮಗು ಮೃತ್ಯು
ಕೋಟ: ಆಟವಾಡುತ್ತಿದ್ದ ವೇಳೆ ಗೆಸ್ಟ್ಹೌಸ್ನ ಗೇಟ್ ಮೈ ಮೇಲೆ ಬಿದ್ದು ಮಗುವೊಂದು ಸಾವನ್ನಪ್ಪಿದ ಘಟನೆ ಕೋಟತಟ್ಟು ಪಡುಕರೆಯಲ್ಲಿ ಮಂಗಳವಾರ ಸಂಜೆ ಸಂಭವಿಸಿದೆ.
ಸ್ಥಳೀಯ ನಿವಾಸಿ ಸುಧೀರ್ ಮೊಗವೀರ ಅವರ ಏಕೈಕ ಪುತ್ರ ಸುಶಾಂತ್ (3) ಮೃತಪಟ್ಟ ಬಾಲಕ. ಮನೆಯ ಸಮೀಪದಲ್ಲಿರುವ ಗೆಸ್ಟ್ಹೌಸ್ನ ಗೇಟ್ನಲ್ಲಿ ಈ ಮಗು ಪ್ರತಿದಿನ ಆಟವಾಡುತ್ತಿದ್ದು ಅದರಂತೆ ಮಂಗಳವಾರ ಆಡುತ್ತಿದ್ದಾಗ ಗೇಟ್ ಕಳಚಿ ಮೈ ಮೇಲೆ ಬಿದ್ದಿತು. ಆಸ್ಪತ್ರೆಗೆ ಕರೆದೊಯ್ಯುವ ಸಂದರ್ಭ ಮೃತಪಟ್ಟಿದೆ.
ಗೆಸ್ಟ್ಹೌಸ್ ನಿರ್ವಹಣೆ ಬಗ್ಗೆ ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಕೋಟ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ದೂರು ದಾಖಲಿಸಿಕೊಂಡಿದ್ದಾರೆ.




