
BIDAR : ಬೆಳ್ಳಂ ಬೆಳಿಗ್ಗೆ ಭ್ರಷ್ಟ ಅಧಿಕಾರಿಗಳ ಮನೆ ಮೇಲೆ ಲೋಕಾಯುಕ್ತ ದಾಳಿ
ಬೀದರ್ ಪಶು ವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ 65 ಕೋಟಿ ಲೂಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ನಗರದಲ್ಲಿ ಏಕ ಕಾಲಕ್ಕೆ ಎರಡು ಕಡೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಅಧಿಕಾರಿಗಳ ಚಳಿ ಬಿಡಿಸಿದ್ದಾರೆ.
ನಿವೃತ್ತ ಕುಲಪತಿ ನಾರಾಯಣ ಸ್ವಾಮಿ ಹಾಗೂ ಹೊರಗುತ್ತಿಗೆ ನೌಕರ ಸುನೀಲ್ ಪಾಟೀಲ್ ಮನೆಯ ಮೇಲೆ ಲೋಕಾಯುಕ್ತ ಡಿ ವೈ ಎಸ್ಪಿ ನೀಲಪ್ಪಾ ಓಲೇಕರ್ ನೇತ್ರತ್ವದಲ್ಲಿ ಬೆಂಗಳೂರಿನಲ್ಲಿ ನಿವೃತ್ತ ಕುಲಪತಿ ನಾರಾಯಣ ಸ್ವಾಮಿ ಮನೆಯ ಮೇಲೆ ಲೋಕಾಯುಕ್ತ ದಾಳಿ ನಡೆದಿದೆ.
ಅದೇ ರೀತಿ ಲೋಕಾಯುಕ್ತ ಪಿಐ ಪ್ರದೀಪ ಕೊಳ್ಳಾ ನೇತ್ರತ್ವದ ತಂಡ ಸುನೀಲ್ ಪಾಟೀಲ್ ಅವರ ನಗರದ ಮೈಲೂರು ಕ್ರಾಸ್ ಸಮೀಪದ ಕ್ಲಾಂಪ್ಲೆಕ್ಸ್ ಹಾಗೂ ಬಸವ ನಗರದ ಮನೆಯ ಮೇಲೆ ದಾಳಿ ನಡೆಸಿ ಕಡತಗಳನ್ನು ಪರಿಶೀಲನೆ ಮಾಡಿದ್ದಾರೆ.
ದಾಳಿಗೆ ಕಾರಣ :
ಖೋಟಾ(ನಕಲಿ) ಏಜೆನ್ಸಿ ತೆಗೆದು ಸುಳ್ಳು ಬಿಲ್ ಗಳನ್ನ ಸೃಷ್ಟಿಸಿ ಯಾವುದೇ ವಸ್ತುಗಳನ್ನು ಖರೀಸದೆ ಸಂಬಂಧ ಪಟ್ಟ ಸಕ್ಷಮ ಪ್ರಾಧಿಕಾರದಿಂದ ಅನುಮತಿ ಪಡೆಯದೆ ಖಾತೆಗಗಳಿಗೆ ಕೋಟ್ಯಂತರ ಹಣ ವರ್ಗಾವಣೆ ಮಾಡಿ ಸುಮಾರು 65 ಕೋಟಿ ಲೂಟಿ ಮಾಡಿರುವ ಆರೋಪ ಕೇಳಿ ಬಂದಿರುವ ಹಿನ್ನೆಲೆ ಲೋಕಾಯುಕ್ತ ದಾಳಿ
ಹಗರಣದ ಅವಧಿ :-
16 ಅಕ್ಕೋಬರ್ 2017 ರಿಂದ
31ಜೂಲೈ 2019 ರ ವರೆಗೆ ನಡೆದ ಹಗರಣ
ಇನ್ನು ದಾಖಲೆ ಪರಿಶೀಲನೆ ಮುಂದುವರೆದಿದೆ
THG BIDAR




