
Udupi
ನೇಜಾರು ಕೊಲೆ ಪ್ರಕರಣ: ಸ್ಪೆಷಲ್ ಪಬ್ಲಿಕ್ ಪ್ರಾಸಿಕ್ಯೂಟರ್, ತ್ವರಿತ ನ್ಯಾಯಾಲಯ ಶೀಘ್ರ ನೇಮಕಕ್ಕೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಆಗ್ರಹಿಸಿದ ಕುಟುಂಬ
ಉಡುಪಿ: ನವೆಂಬರ್ 12 ರಂದು ನೇಜಾರಿನ ತೃಪ್ತಿ ಲೇಔಟ್ ನಲ್ಲಿ ನಡೆದ ತಾಯಿ ಮತ್ತು ಮೂವರುಮಕ್ಕಳ ಕೊಲೆ ಪ್ರಕರಣ ನಡೆದು ಒಂದು ತಿಂಗಳು ಸಂದಿದೆ. ಈ ನಡುವೆ ಈ ಪ್ರಕರಣದ ವಿಚಾರಣೆಯನ್ನು ಶೀಘ್ರ ನಡೆಸಿ ಆರೋಪಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳಲು ಸಂತ್ರಸ್ಥ ಕುಟಂಬ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್, ತ್ವರಿತ ನ್ಯಾಯಾಲಯ ನೇಮಕಕ್ಕೆ ಸಂತ್ರಸ್ಥ ಕುಟುಂಬಸ್ಥರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಆಗ್ರಹಿಸಿದ್ದಾರೆ.

ಸಂತ್ರಸ್ಥ ಕುಟುಂಬ ಸದಸ್ಯರು ಮತ್ತು ಮುಸ್ಲಿಂ ಒಕ್ಕೂಟದ ಪದಾಧಿಕಾರಿಗಳು ಮುಖ್ಯಮಂತ್ರಿಯನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದಾರೆ.
ಸಂತ್ರಸ್ಥ ಕುಟುಂಬ ಸದಸ್ಯರಾದ ನೂರ್ ಮುಹಮ್ಮದ್, ಅಶ್ರಫ್ ಮತ್ತು ಎಮ್.ಎ ಗಫೂರ್, ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಕಾರ್ಯದರ್ಶಿ ಇಸ್ಮಾಯಿಲ್ ಕಟಪಾಡಿ, ಮುಸ್ಲಿಮ್ ಒಕ್ಕೂಟದ ಉಡುಪಿ ತಾಲೂಕು ಅಧ್ಯಕ್ಷರಾದ ಇರ್ಷಾದ್ ನೇಜಾರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.




