ನೆಲಮಂಗಲ-ಯಶವಂತಪುರ ರಸ್ತೆಗೆ ನಟಿ ಲೀಲಾವತಿ ಹೆಸರಿಡಲು ಆಗ್ರಹ: ಪ್ರಸ್ತಾವನೆ ಸಲ್ಲಿಕೆ

ಬೆಂಗಳೂರು:ಬೆಂಗಳೂರಿನ ರಸ್ತೆಗಳನ್ನು ನೆನಪಿಟ್ಟುಕೊಳ್ಳುವುದು ಸುಲಭ ಯಾಕೆಂದರೆ ನಗರದ ಬಹುತೇಕ ರಸ್ತೆಗಳಿಗೆ ಕನ್ನಡ ಚಿತ್ರರಂಗದ ನಟ, ನಟಿಯರು, ರಾಜಕೀಯ ಗಣ್ಯರ ಹೆಸರು, ಹಾಗೂ ಸಾಹಿತಿಗಳ ಹೆಸರಿಡಲಾಗಿದೆ.

ಡಾ. ರಾಜ್‌ಕುಮಾರ್‌ ರಸ್ತೆ, ಪುನೀತ್‌ ರಾಜ್‌ ಕುಮಾರ್‌ ರಸ್ತೆ, ವಾಟಾಳ್ ನಾಗರಾಜ್‌ ರಸ್ತೆ, ಕುವೆಂಪು ರಸ್ತೆ, ಪಾರ್ವತಮ್ಮ ರಾಜ್‌ಕುಮಾರ್‌ ರಸ್ತೆ, ಅಂಬರೀಷ್‌ ರಸ್ತೆ ಹೀಗೆ ಅನೇಕರ ಹೆಸರನ್ನು ಬೆಂಗಳೂರಿನ ರಸ್ತೆಗಳಿಗೆ ಇಡಲಾಗಿದ್ದು, ಇದೀಗ ಮತ್ತೊಂದು ಹಿರಿಯ ನಟಿಯ ಹೆಸರನ್ನು ಬೆಂಗಳೂರಿನ ರಸ್ತೆ ಇಡುವಂತೆ ಆಗ್ರಹ ಕೇಳಿ ಬರುತ್ತಿದೆ.ನಟಿ ಲೀಲಾವತಿ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೇ ಪಂಚ ಭಾಷೆಯಲ್ಲಿ ನಟಿಸಿ ಜನಪ್ರಿಯತೆ ಪಡೆದವರು. ನಟನೆಯಲ್ಲಿ ಮಾತ್ರವಲ್ಲದೇ ಸಮಾಜ ಸೇವೆಯಲ್ಲೂ ಗುರುತಿಸಿಕೊಂಡವರು.

ಬೆಂಗಳೂರಿನ ಹಲವು ರಸ್ತೆಗಳಿಗೆ ಪುನೀತ್ ರಾಜ್ ಕುಮಾರ್, ವಿಷ್ಣುವರ್ಧನ್, ರಾಜ್ ಕುಮಾರ್ ಸೇರಿದಂತೆ ಹಲವು ಪ್ರಸಿದ್ಧ ನಟರ ಹೆಸರಿಡಲಾಗಿದೆ. ಇದೇ ರೀತಿ ನೆಲಮಂಗಲದಿಂದ ಯಶವಂತಪುರ ಸಂಪರ್ಕಿಸುವ ರಸ್ತೆಗೆ ನಟಿ ಲೀಲಾವತಿ ಹೆಸರಿಡುವಂತೆ ಬಿಬಿಎಂಪಿ ನೌಕರರ ಕ್ಷೇಮಾಭಿವೃದ್ಧಿ ಸಂಘದಿಂದ ಪಾಲಿಕೆ ಮುಖ್ಯ ಆಯುಕ್ತರಿಗೆ ಮನವಿ ಮಾಡಿದ್ದಾರೆ.

Latest Indian news

Popular Stories