
ಭದ್ರತಾಲೋಪದ ನಂತರ ಮತ್ತೆ ಸಂಸತ್ ಕಲಾಪ ಪ್ರಾರಂಭ; ತನಿಖೆ ನಡೆಸುವುದಾಗಿ ಓಂ ಬಿರ್ಲಾ ಭರವಸೆ
ದೆಹಲಿ ಡಿಸೆಂಬರ್ 13: ಲೋಕಸಭೆಯಲ್ಲಿ (Lok Sabha) ಇಂದು (ಬುಧವಾರ) ಭದ್ರತಾ ಲೋಪ (security breach) ಸಂಭವಿಸಿದಾಗ ಸ್ಥಗಿತಗೊಳಿಸಿದ್ದ ಕಲಾಪ ಮಧ್ಯಾಹ್ನ 2ಗಂಟೆಗೆ ಮತ್ತೆ ಆರಂಭವಾಗಿದೆ.ಪ್ರಾಥಮಿಕ ವರದಿ ಬಂದಿದೆ. ವಿವರವಾದ ತನಿಖಾ ವರದಿಗಳನ್ನು ಸದನದಲ್ಲಿ ಮಂಡಿಸಲಾಗುವುದು.
ಒಳಗೆ ನುಗ್ಗಿದ ಇಬ್ಬರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ, ಕಟ್ಟಡದ ಹೊರಗಿದ್ದ ಇಬ್ಬರನ್ನೂ ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಹೇಳಿದ್ದಾರೆ. ಭದ್ರತಾಲೋಪದ ಬಗ್ಗೆ ವಿವರವಾದ ಪರಿಶೀಲನೆ ನಡೆಯಲಿದೆ ಎಂದು ಬಿರ್ಲಾ ಸದನಕ್ಕೆ ಭರವಸೆ ನೀಡಿದ್ದು ಹೊಗೆಗೆ ಕಾರಣವಾದ ರಾಸಾಯನಿಕವನ್ನು ಪರಿಶೀಲಿಸಲಾಗುತ್ತಿದೆ ಎಂದಿದ್ದಾರೆ.
ಬಹುಜನ ಸಮಾಜ ಪಕ್ಷದ ಸಂಸದ ಡ್ಯಾನಿಶ್ ಅಲಿ ಅವರು ಎನ್ಡಿಟಿವಿಗೆ ಮಾಹಿತಿ ನೀಡಿ, ಸಂದರ್ಶಕರ ಪಾಸ್ ಅನ್ನು ಜ ವಶಪಡಿಸಿಕೊಂಡಿದ್ದಾರೆ. ಬಿಜೆಪಿ ಸಂಸದ ಪ್ರತಾಪ್ ಸಿಂಹ ಅವರ ಕಚೇರಿಯಿಂದ ನೀಡಲಾಗಿದೆ ಎಂದು ಹೇಳಿದ್ದಾರೆ. ಆದಾಗ್ಯೂ, ಯಾವ ಸಂಸದರ ಕಚೇರಿಯು ಪಾಸ್ ಅನ್ನು ನೀಡಿದರೂ, ಯಾವುದೇ ಸಂದರ್ಶಕರು ಸಂಸತ್ತಿನ ಒಳಗೆ ಅನುಮತಿಸುವ ಮೊದಲು ಐದು ಹಂತದ ಭದ್ರತೆಯನ್ನು ತೆರವುಗೊಳಿಸಬೇಕಾಗಿದೆ.




