ಲೋಕಸಭೆಯಲ್ಲಿ ಭಾರೀ ಭದ್ರತಾ ಲೋಪಕ್ಕೆ ಕಾರಣವಾದ ವ್ಯಕ್ತಿಯ ಪಾಸ್ ಸಂಸದ ಪ್ರತಾಪ್ ಸಿಂಹ ಹೆಸರಿನಲ್ಲಿ ನೀಡಲಾಗಿದೆ | ಸಾಗರ್ ಶರ್ಮಾ, ಮನೋರಂಜನ್ ಡಿ ಪಾಸ್ ನಲ್ಲಿ ನಮೋದಿತ ಹೆಸರು!

ಲೋಕಸಭೆಯಲ್ಲಿ ಬುಧವಾರದಂದು ಪ್ರಮುಖ ಭದ್ರತಾ ಲೋಪ ವರದಿಯಾಗಿದೆ. ಇಂಡಿಯಾ ಟುಡೇ ವರದಿ ಪ್ರಕಾರ ಸದನದ ಒಳಗಿನಿಂದ ಬಂಧಿತ ಆರೋಪಿಗಳಲ್ಲಿ ಒಬ್ಬನಿಗೆ ಬಿಜೆಪಿ ಸಂಸದ ಪ್ರತಾಪ್ ಸಿಂಹ ಅವರ ಹೆಸರಿನಲ್ಲಿ ಪಾಸ್ ನೀಡಲಾಗಿದೆ‌.

ಪಾಸ್‌ನಲ್ಲಿ ಬಂಧಿತ ಸಾಗರ್ ಶರ್ಮಾ ಹೆಸರಿದ್ದು, ಬಿಜೆಪಿ ಸಂಸದ ಪ್ರತಾಪ್ ಸಿಂಹ ಅವರ ಹೆಸರಿನಲ್ಲಿ ನೀಡಲಾಗಿದೆ.

ಮತ್ತೊಬ್ಬ ಒಳನುಗ್ಗಿದ ವ್ಯಕ್ತಿಯನ್ನು ವೃತ್ತಿಯಲ್ಲಿ ಎಂಜಿನಿಯರ್ ಆಗಿರುವ ಮೈಸೂರು ಮೂಲದ ಮನೋರಂಜನ್ ಡಿ ಎಂದು ಗುರುತಿಸಲಾಗಿದೆ.

ಇಬ್ಬರು ವ್ಯಕ್ತಿಗಳು ಸಾರ್ವಜನಿಕ ಗ್ಯಾಲರಿಯಿಂದ ಲೋಕಸಭೆಯ ಚೇಂಬರ್‌ಗೆ ಜಿಗಿದು ಹಳದಿ ಬಣ್ಣದ ಹೊಗೆಯನ್ನು ಹೊರಸೂಸುವ ಡಬ್ಬಿಗಳನ್ನು ತೆರೆದು ಸಂಸತ್ತಿನ ಸದಸ್ಯರಲ್ಲಿ (ಸಂಸದರು) ಗಾಬರಿಯನ್ನು ಉಂಟುಮಾಡಿದರು.

ಘಟನೆ ನಡೆದ ಕೂಡಲೇ ಸದನವನ್ನು ಮುಂದೂಡಲಾಯಿತು.

ಮಧ್ಯಾಹ್ನ 1 ಗಂಟೆ ಸುಮಾರಿಗೆ ಶೂನ್ಯ ವೇಳೆಯಲ್ಲಿ ಇಬ್ಬರು ಒಳನುಗ್ಗಿ ಸಾರ್ವಜನಿಕ ಗ್ಯಾಲರಿ ಸಂಖ್ಯೆ ನಾಲ್ಕರಿಂದ ಜಿಗಿದಿದ್ದಾರೆ. ಅವರು ‘ತನಾಶಾಹಿ ನಹೀ ಚಲೇಗಿ’ (ಸರ್ವಾಧಿಕಾರವನ್ನು ಅನುಮತಿಸಲಾಗುವುದಿಲ್ಲ) ಎಂದು ಘೋಷಣೆ ಕೂಗಿದ್ದರು ಎನ್ನಲಾಗಿದೆ.

ಸಂಸತ್ತಿನ ಹೊರಗೆ ಬಣ್ಣ ಹೊಗೆ ಬಿಡುವ ಕ್ಯಾನ್‌ಗಳನ್ನು ಬಳಸಿ ಪ್ರತಿಭಟನೆ ನಡೆಸುತ್ತಿದ್ದ ಮಹಿಳೆ ಸೇರಿದಂತೆ ಇಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Latest Indian news

Popular Stories