Mandya

ಮಂಡ್ಯ: ನಿಮ್ಮ ಮನೆ, ಮಸೀದಿಯಲ್ಲಿ ‘ಅಲ್ಲಾ ಹು ಅಕ್ಬರ್’ ಅಂತ ಹೇಳಿ ಅದನ್ನು ಬಿಟ್ಟು ಸಮಾಜದಲ್ಲಿ ಅಲ್ಲ – ಕಲ್ಲಡ್ಕ ಪ್ರಭಾಕರ್ ಭಟ್

ಮಂಡ್ಯ :ನಿಮ್ಮ ಮನೆ, ಮಸೀದಿಯಲ್ಲಿ ‘ಅಲ್ಲಾ ಹು ಅಕ್ಬರ್’ ಅಂತ ಹೇಳಿ ಅದನ್ನು ಬಿಟ್ಟು ಸಮಾಜದಲ್ಲಿ ಅಲ್ಲ ಎಂದು ಆರ್‍ಎಸ್‍ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಹೇಳಿದ್ದಾರೆ.

ಮುಸ್ಕಾನ್ ಎಂಬ ವಿದ್ಯಾರ್ಥಿನಿ ಅಲ್ಲಾ ಹು ಅಕ್ಬರ್ ಎಂದು ಇಲ್ಲೇ ಕೂಗಿದ್ದು. ಇಂತಹ ಹೆಣ್ಣುಮಕ್ಕಳಿಗೆ ಹಣ ಕೊಟ್ಟು, ಶಹಬ್ಬಾಸ್‍ಗಿರಿ ಕೊಟ್ಟು ಅಲ್ಕೈದಾ ಭಯೋತ್ಪಾದಕ ಸಂಸ್ಥೆ ಬೆಳೆಸುತ್ತಿದೆ. ಈಕೆ ಅವರ ಸಂಪರ್ಕದಲ್ಲಿದ್ದು, ಮಂಡ್ಯದ ಜನ ಎಚ್ಚರಿಕೆ ವಹಿಸಬೇಕು ಅಂತ ಅವರು ಕರೆ ನೀಡಿದರು.

ಇನ್ನೂ ಯಾವಾಗ ಮುಸಲ್ಮಾನ ಹಾಗೂ ಕ್ರೈಸ್ತ ರಾಜರು ಇಲ್ಲಿಗೆ ಕಾಲಿಟ್ಟರೋ ಆಗ ಮತಾಂತರ ಮಾಡಲು ಮುಂದಾದರು. ಆಗಲೇ ಮುಸ್ಲಿಂ ಲೀಗ್ ಪ್ರಾರಂಭ ಆಯ್ತು. ಅದಕ್ಕೆ ಕಾಂಗ್ರೆಸ್ ಕೂಡಾ ಬೆಂಬಲ ಕೊಡುತ್ತಿದೆ. ಕಾಂಗ್ರೆಸ್ ನಾಯಕರು ಹಿಂದೂಗಳ ಕೈಬಿಟ್ಟಿದ್ದಕ್ಕೆ ದೇಶ ವಿಭಜನೆ ಆಯ್ತು, ಪಾಕಿಸ್ತಾನ ನಿರ್ಮಾಣ ಆಯ್ತು ಅಂತ ಕಾಂಗ್ರೆಸ್ ವಿರುದ್ದ ಕಿಡಿಕಾರಿದರು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button