ಪಾದಚಾರಿಗಳ ಮೇಲೆ ಹರಿದ ಪೆಟ್ರೋಲ್ ಟ್ಯಾಂಕರ್: ಒಬ್ಬ ಮಹಿಳೆ ಸ್ಥಳದಲ್ಲೇ ಸಾವು, ಮತ್ತೊಬ್ಬರು ಗಂಭೀರ

ಬಳ್ಳಾರಿ:ನಗರದ ಮೋತಿ ಸರ್ಕಲ್ ನಲ್ಲಿ ಪಾದಚಾರಿಗಳ ಮೇಲೆ ಪೆಟ್ರೋಲ್ ಟ್ಯಾಂಕ್ ಹರಿದು ಓರ್ವ ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮೃತಪಟ್ಟ ಮಹಿಳೆಯನ್ನು 26 ವರ್ಷದ ರಫಿಯಾಬೇಗಂ ಎಂದು ಗುರುತಿಸಲಾಗಿದೆ.ಸಬಿನಾ ಅವರ ಕಾಲಿನ ಮೇಲೆ ಪೆಟ್ರೋಲ್ ಟ್ಯಾಂಕರ್ ಹರಿದು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ರಸ್ತೆ ದಾಟುತ್ತಿದ್ದ ಮಹಿಳೆಯರ ಮೇಲೆ ಪೆಟ್ರೋಲ್ ಟ್ಯಾಂಕರ್ ನುಗ್ಗಿದ್ದು, ಘಟನೆಯ ದೃಶ್ಯಗಳು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಬಳ್ಳಾರಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Latest Indian news

Popular Stories