Featured StoryUdupi

ಕುಂದಾಪುರ: ಮನೆಗೆ ನುಗ್ಗಿ ಲಕ್ಷಾಂತರ ರೂಪಯಿಯ ಚಿನ್ನಾಭರಣ ಕಳ್ಳತನ

ಕುಂದಾಪುರ: ಕಳ್ಳರು ತಡರಾತ್ರಿ ಮನೆಗೆ ನುಗ್ಗಿ ಕಳ್ಳತನ ನಡೆಸಿದ ಘಟನೆ ವರದಿಯಾಗಿದೆ.

KSRTC ಬಸ್‌ ನಿಲ್ದಾಣ ಬಳಿ ಕಸಬಾ ಗ್ರಾಮ ಕುಂದಾಪುರದಲ್ಲಿ ಇರುವ ಅಬ್ದುಲ್ ಸಲಾಮ್ ಅವರ ಮನೆಯಲ್ಲಿ ಕಳ್ಳತನ ನಡೆದಿದೆ. ಮನೆಯ ಪಶ್ಚಿಮದಲ್ಲಿರುವ ಪ್ಯಾಸೇಜಿನ ಉತ್ತರದ ಗೋಡೆಗೆ ಅಳವಡಿಸಿದ ಕಬ್ಬೀಣದ ಗ್ರಿಲ್‌ ಇರುವ ಬಾಗಿಲಿನ ಚಿಲಕವನ್ನು  ದಿನಾಂಕ 26/12/2023 ರಂದು ರಾತ್ರಿ 11:00   ಗಂಟೆಯಿಂದ  ದಿನಾಂಕ 27/12/2023 ರಂದು   ಬೆಳಿಗ್ಗೆ 06:00 ಗಂಟೆಯ ನಡುವೆ  ಯಾರೋ ಕಳ್ಳರು ತೆಗೆದು ಒಳಪ್ರವೇಶಿಸಿ ಮನೆಯ ಕೋಣೆಯಲ್ಲಿದ್ದ  ಕಪಾಟಿನ ಬಾಗಿಲು  ತೆಗೆದು ಅದರೊಳಗೆ ಇದ್ದ 320 ಗ್ರಾಂ ತೂಕದ ಚಿನ್ನದ ಒಡವೆಗಳನ್ನು ಕಳವು ಮಾಡಿಕೊಂಡು ಹೋಗಿದ್ದಾರೆ.

ಈ ಬಗ್ಗೆ ಕುಂದಾಪುರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 129/2023 ಕಲಂ: 457, 380 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button