CrimeFeatured StoryUdupi

ಮಲ್ಪೆ: ಪಡುಕೆರೆ ಬೀಚ್’ನಲ್ಲಿ ಪ್ರವಾಸಿಗರಿಂದ ಕಾರು ಚಾಲನೆ – ಪ್ರಕರಣ ದಾಖಲು

ಮಲ್ಪೆ: ಪಡುಕೆರೆ ಬೀಚ್ ಪ್ರದೇಶದಲ್ಲಿ ವಾಹನ ಚಾಲನೆ ನಿಷೇಧವಿದ್ದರೂ ಕಾರು ಚಲಾಯಿಸಿದ ಮೂವರು ಪ್ತವಾಸಿಗರ ಮೇಲೆ ಪ್ರಕರಣ ದಾಖಲಾಗಿದೆ.

ಮಂಗಳವಾರ‌ ಸಂಜೆ 5:30 ಗಂಟೆಯ ಸಮಯಕ್ಕೆ ಪಡುಕೆರೆಯ ಬೀಚ್ ನಲ್ಲಿ ವಾಹನ ಸಂಚಾರ ನಿಷೇದಿಸಿರುವ ಸ್ಥಳದಲ್ಲಿ ಒಂದು ಕಾರಿನಲ್ಲಿ 3 ಜನ ಕುಳಿತುಕೊಂಡು ಕಾರನ್ನು ಅತೀ ವೇಗ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸುತ್ತಿದ ಕಾರಣ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಕಾರನ್ನು 3 ಜನ ಪ್ರವಾಸಿರು ಸಮುದ್ರ ಬೀಚ್ ನ ಮರಳಿನಲ್ಲಿ ಚಲಾಯಿಸಿದ ಕಾರಣ ಕಾರಿನ ಟಯರ್ ಸಮುದ್ರ ಮರಳಿನಲ್ಲಿ ಊತು ಹೋಗಿದೆ.  ಕಾರಿನ ಸಂಖ್ಯೆ KL-18-W- 4664   ಕೆಂಪು ಬಣ್ಣದ ರೆನಾಲ್ಟ್ ಕಂಪೆನಿಯ ಕಾರು ಆಗಿರುತ್ತದೆ. ಕಾರಿನಲ್ಲಿ ಇದ್ದ 3 ಜನ ಕೇರಳದ ಪ್ರವಾಸಿಗರಾದ ಮಣಿಕಂಠ, ಅಯ್ಯಪ್ಪನ್, ಬಾಲಮುರುಗನ್ ಎಂದು ತಿಳಿದು ಬಂದಿದೆ.

3 ಜನರು ತಮ್ಮ ಪ್ರಾಣಕ್ಕೆ ಕುತ್ತಾಗುತ್ತದೆ ಎಂದು ತಿಳಿದರೂ KL-18-W-4664   ನೇ   ಕಾರನ್ನು ಪಡುಕೆರೆಯ ಬೀಚಿನಲ್ಲಿ ಅತೀವೇಗ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಹೋಗಿ ಪರಿಸರದ ಜನರಿಗೆ ತೊಂದರೆ ಉಂಟು ಮಾಡಿರುತ್ತಾರೆ ಎಂದು ಆರೋಪಿಸಲಾಗಿದೆ.

 ಈ ಬಗ್ಗೆ ಮಲ್ಪೆ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 146/2023 ಕಲಂ: 279, 308 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button