CrimeFeatured StoryUdupi

ಕೋಟ: ಬನ್ನೇರಳಕಟ್ಟೆಯ ಪ್ರಾಥಮಿಕ ಆರೋಗ್ಯ ಕೇಂದ್ರದ ಬಳಿಯಿರುವ ಬಾವಿಯಲ್ಲಿ ಯುವಕನ ಮೃತದೇಹ ಪತ್ತೆ

ಕೋಟ: ಯುವಕನೊರ್ವ ಮನೆಯಲ್ಲಿ ಕಾಣಿಸದೆ ಇದ್ದಾಗ ಹುಡುಕಾಡಿದಾಗ ಆತನ ಮೃತದೇಹ ಬಿಲ್ಲಾಡಿ ಗ್ರಾಮದ ಬನ್ನೇರಳಕಟ್ಟೆಯ ಪ್ರಾಥಮಿಕ ಆರೋಗ್ಯ ಕೇಂದ್ರದ ಬಳಿ ಇರುವ ಬಾವಿಯಲ್ಲಿ ಪತ್ತೆಯಾಗಿದೆ.

ಮೃತ ಯುವಕ ಕಾರ್ತಿಕ್ (26) ಎಂದು ಗುರುತಿಸಲಾಗಿದೆ.

ಕಾರ್ತಿಕ್ (26) ಬೆಂಗಳೂರಿನಲ್ಲಿ ಹೊಟೆಲ್ ಕೆಲಸ ಮಾಡಿಕೊಂಡಿದ್ದು,4 ತಿಂಗಳ ಮುಂಚೆ ಬೆಂಗಳೂರಿನಿಂದ ಮನೆಗೆ ಬಂದಿದ್ದು ನಂತರ ಬೆಂಗಳೂರಿಗೆ ಹೋಗದೇ ಮನೆಯಲ್ಲೇ ಇರುತ್ತಿದ್ದ.ಮೃತ ಕಾರ್ತಿಕ್ ಪ್ರತಿದಿನ ಬೆಳಿಗ್ಗೆ ತಡವಾಗಿ ಎಳುತ್ತಿದ್ದು ದಿನಾಂಕ 27/12/2023 ರಂದು ಬೆಳಿಗ್ಗೆ 08 ಗಂಟೆ ಸುಮಾರಿಗೆ ಕಾರ್ತಿಕ್ ಮನೆಯಲ್ಲಿ ಮಲಗಿದ್ದು ಮಧ್ಯಾಹ್ನ 1.30 ರ ಹೊತ್ತಿಗೆ ತಾಯಿ ಕರೆ ಮಾಡಿ ಕಾರ್ತಿಕ್ ಮನೆಯಲ್ಲಿ ಇಲ್ಲದೇ ಇರುವುದನ್ನು ಗಮನಿಸಿದಾಗ ಆತನ ಸ್ನೇಹಿತರಲ್ಲಿ ವಿಚಾರಿಸಿದಾಗ ಮಾಹಿತಿ ಸಿಕ್ಕಿರುವುದಿಲ್ಲ. ನಂತರ ಹುಡುಕಾಡಿದ್ದಲ್ಲಿ ಆತನು ಬಿಲ್ಲಾಡಿ ಗ್ರಾಮದ ಬನ್ನೇರಳಕಟ್ಟೆಯ ಪ್ರಾಥಮಿಕ ಆರೋಗ್ಯ ಕೇಂದ್ರದ ಬಳಿ ಇರುವ ಬಾವಿಯಲ್ಲಿ ಬಿದ್ದಿರುವುದಾಗಿ ತಿಳಿದು ಬಂದಿದ್ದು ಕಾರ್ತಿಕ್ ನನ್ನು ಮೇಲಕ್ಕೆತ್ತಿ ನೋಡಿದಾಗ ಆತನು ಮೃತಪಟ್ಟಿದ್ದಾನೆ. 

ಈ ಬಗ್ಗೆ ಕೋಟ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 48/2023 ಕಲಂ:174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button