
ಮಣಿಪಾಲ: ಬೈಕ್’ನ ಸೈಲೆನ್ಸರ್’ನಲ್ಲಿ ಬೆಂಕಿ ಕಿಡಿ ಹಾರಿಸಿ ಸಾರಗವಜನಿಕರಿಗೆ ತೊಂದರೆ ನೀಡಿದ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಾಗಿದೆ.
ಹೊಸ ವರ್ಷದ ಮುನ್ನ ದಿನ ದಿನಾಂಕ 31/12/2023 ರಂದು ರಮಣಿಪಾಲ ಸಿಂಡಿಕೇಟ್ ಸರ್ಕಲ್ – ಕಾಯಿನ್ ಸರ್ಕಲ್ ನಡುವಿನ ವಿ ಎಸ್ ಆಚಾರ್ಯ ರಸ್ತೆಯಲ್ಲಿ 7 ರಿಂದ 10 ಜನರು ಕಾರು ಹಾಗೂ ದ್ವಿ ಚಕ್ರ ವಾಹನಗಳಲ್ಲಿ ಸವಾರಿ ಮಾಡಿಕೊಂಡು ಬಂದು, ರಾಯಲ್ ಎನ್ ಫೀಲ್ಡ್ ಮೋಟಾರ್ ಸೈಕಲ್ ನ ಸವಾರ ಸೈಲೆನ್ಸರ್ ನಲ್ಲಿ ಬೆಂಕಿಯ ಕಿಡಿ ಬರುವ ಹಾಗೆ ಮಾಡಿ ಸಾರ್ವಜನಿಕರಿಗೆ ಸಮಸ್ಯೆ ಸೃಷ್ಟಿಸಿದ ಕುರಿತು ವರದಿಯಾಗಿದೆ.
ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 01/2024 ಕಲಂ: 143, 147, 279, 290 ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ .




