CrimeUdupi

ಮಣಿಪಾಲ: ಬೈಕ್’ನ ಸೈಲೆನ್ಸರ್’ನಲ್ಲಿ ಬೆಂಕಿ ಕಿಡಿ ಹಾರಿಸಿ ಸಾರ್ವಜನಿಕರಿಗೆ ತೊಂದರೆ – ಪ್ರಕರಣ ದಾಖಲು

ಮಣಿಪಾಲ: ಬೈಕ್’ನ ಸೈಲೆನ್ಸರ್’ನಲ್ಲಿ ಬೆಂಕಿ ಕಿಡಿ ಹಾರಿಸಿ ಸಾರಗವಜನಿಕರಿಗೆ ತೊಂದರೆ ನೀಡಿದ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಾಗಿದೆ.

ಹೊಸ ವರ್ಷದ ಮುನ್ನ ದಿನ ದಿನಾಂಕ 31/12/2023 ರಂದು ರಮಣಿಪಾಲ ಸಿಂಡಿಕೇಟ್‌ ಸರ್ಕಲ್‌ – ಕಾಯಿನ್‌ ಸರ್ಕಲ್‌ ನಡುವಿನ  ವಿ ಎಸ್‌ ಆಚಾರ್ಯ ರಸ್ತೆಯಲ್ಲಿ  7 ರಿಂದ 10 ಜನರು  ಕಾರು  ಹಾಗೂ ದ್ವಿ ಚಕ್ರ ವಾಹನಗಳಲ್ಲಿ  ಸವಾರಿ ಮಾಡಿಕೊಂಡು ಬಂದು,  ರಾಯಲ್‌ ಎನ್‌ ಫೀಲ್ಡ್‌  ಮೋಟಾರ್‌ ಸೈಕಲ್‌ ನ  ಸವಾರ  ಸೈಲೆನ್ಸರ್‌ ನಲ್ಲಿ ಬೆಂಕಿಯ ಕಿಡಿ ಬರುವ ಹಾಗೆ ಮಾಡಿ ಸಾರ್ವಜನಿಕರಿಗೆ ಸಮಸ್ಯೆ ಸೃಷ್ಟಿಸಿದ ಕುರಿತು ವರದಿಯಾಗಿದೆ.

ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 01/2024 ಕಲಂ: 143, 147, 279, 290 ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ .

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button