obituary

ಉಡುಪಿ: ಖ್ಯಾತ ವಕೀಲ ಜಿ ಮೋಹನ್ ದಾಸ್ ಶೆಟ್ಟಿ ಹೃದಯಾಘಾತದಿಂದ ನಿಧನ

ಉಡುಪಿ: ಜಿಲ್ಲೆಯ ಖ್ಯಾತ ವಕೀಲರಾ್ ಜಿ ಮೋಹನ್ ದಾಸ್ ಶೆಟ್ಟಿಯವರು ಹೃದಯಾಘಾತದಿಂದ ಇಹಲೋಕ ತ್ಯಜಿಸಿದ್ದಾರೆ.

ಹೃದಯಾಘಾತವಾದ ಕಾರಣ ಅವರನ್ನು ಮಣಿಪಾಲದ ಕೆಎಮ್.ಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ಅವರು ಮೃತಪಟ್ಟಿರುವ ವಿಚಾರ ಧೃಡ ಪಟ್ಟಿದ್ದು, ಮೃತರು ತಂದೆ, ತಾಯಿ, ಪತ್ನಿ, ಪುತ್ರಿಯನ್ನು ಅಗಲಿದ್ದಾರೆ.

1998ರಲ್ಲಿ ಪುತ್ತೂರಿನ ವಿವೇಕಾನಂದ ಕಾನೂನು ಮಹಾವಿದ್ಯಾಲಯದಲ್ಲಿ ಕಾನೂನು ಪದವಿ ಪಡೆದು ಮಾರ್ಚ್ 1998 ರಿಂದ ಉಡುಪಿಯ ಹಿರಿಯ ನ್ಯಾಾಯವಾದಿ ಆನಂದ ಶೆಟ್ಟಿಯವರ ಕಚೇರಿಯಲ್ಲಿ ಕಿರಿಯ ನ್ಯಾಯವಾದಿಯಾಗಿ ತರಬೇತಿ ಪಡೆದುಕೊಂಡಿದ್ದರು. 2001ರಿಂದ ಉಡುಪಿಯಲ್ಲಿ ಸ್ವಂತ ಕಚೇರಿ ಮಾಡಿದ್ದರು. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಕೆನರಾ ಬ್ಯಾಂಕ್, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕ್ ಆಫ್ ಬರೋಡಾ, ಕರ್ಣಾಟಕ ಬ್ಯಾಂಕ್, ಎಸ್‌ಸಿಡಿಸಿಸಿ, ಓರಿಯಂಟಲ್ ಇನ್ಶೂರೆನ್‌ಸ್‌ ಕಂಪೆನಿ ಲಿ, ಗುರು ಮಾಚಿದೇವ ವಿ.ಸ.ಸಂಘ, ಸಾಲಿಹಾತ್ ಸಮೂಹ ಶಿಕ್ಷಣ ಸಂಸ್ಥೆ, ಹೂಡೆ ಸೇರಿದಂತೆ ಹಲವಾರು ಸಂಘ-ಸಂಸ್ಥೆಗಳಲ್ಲಿ ಕಾನೂನು ಸಲಹೆಗಾರರಾಗಿದ್ದರು.

ಕಿರಿಯ ನ್ಯಾಯವಾದಿಗಳಿಗೆ ಮಾರ್ಗದರ್ಶಕರಾಗಿದ್ದು ಉಡುಪಿಯ ವಕೀಲರ ಸಂಘದಲ್ಲಿ ಹಲವಾರು ಹುದ್ದೆಗಳನ್ನು ನಿರ್ವಹಿಸಿದ್ದರು. ಮೃತರ ಅಗಲುವಿಕೆಗೆ ಉಡುಪಿ ವಕೀಲರ ಸಂಘದ ಅಧ್ಯಕ್ಷ ರೆನೋಲ್ಡ್‌ ಪ್ರವೀಣ್ ಕುಮಾರ್, ಪ್ರಧಾನ ಕಾರ್ಯದರ್ಶಿ ರಾಜೇಶ್ ಎ.ಆರ್., ಮಾಜಿ ಅಧ್ಯಕ್ಷರಾದ ಮಟ್ಟಾರು ರತ್ನಾಕರ ಹೆಗ್ಡೆ, ಟಿ.ವಿಜಯ ಕುಮಾರ್ ಶೆಟ್ಟಿ, ಬಿ.ನಾಗರಾಜ್, ಎ.ಸಂಜೀವ, ಜಿ.ಅಶೋಕ್ ಕುಮಾರ್ ಶೆಟ್ಟಿ, ಸಾಲಿಹಾತ್ ಸಮೂಹ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಅಸ್ಲಮ್ ಹೈಕಾಡಿ, ಗುರುಮಾಚಿದೇವ ಸಹಕಾರಿ ಸಂಘದ ಅಧ್ಯಕ್ಷ, ನ್ಯಾಯವಾದಿ ಎಚ್. ಆನಂದ ಮಡಿವಾಳ, ವಕೀಲರ ಸಂಘದ ಎಲ್ಲ ನ್ಯಾಯವಾದಿಗಳು ಸಂತಾಪ ಸೂಚಿಸಿದ್ದಾರೆ.

IMG 20240113 WA0034 obituary

 

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button