Udupi

ಬಿಜೆಪಿ ಹಿರಿಯ ಮುಖಂಡ ಮಲ್ಪೆ ಸೋಮಶೇಖರ ಭಟ್ ನಿಧನ

ಉಡುಪಿ, ಫೆ.4: ಬಿಜೆಪಿ ಪಕ್ಷದ ಹಿರಿಯ ಮುಖಂಡ ಹಾಗೂ ಆರ್ ಎಸ್ ಎಸ್ ಧುರೀಣ ಮಲ್ಪೆ ಸೋಮಶೇಖರ ಭಟ್(89) ಇಂದು ನಿಧನರಾದರು.

ಜನ ಸಂಘದ ಹಿರಿಯ ನಾಯಕರಾಗಿದ್ದ ಇವರು ಉಡುಪಿ ಜಿಲ್ಲೆಯಲ್ಲಿ ಬಿಜೆಪಿ ಪಕ್ಷವನ್ನು ಕಟ್ಟಿ ಬೆಳೆಸಿದ್ದರು. ಉಡುಪಿ ಪುರಸಭೆ ಮಾಜಿ ಅಧ್ಯಕ್ಷ ರಾಗಿ ಸೇವೆ ಸಲ್ಲಿಸಿದ ಇವರು,
ವರುಣ್ ಪೈಪಿಂಗ್ ಸಿಸ್ಟಮ್ ನ ಸ್ಥಾಪಕರಾಗಿದ್ದಾರೆ. ಇವರು ಮಾಜಿ ಸಚಿವ ಡಾ.ವಿ.ಎಸ್.ಆಚಾರ್ಯರ ರಾಜಕೀಯ ಗುರುಗಳಾಗಿದ್ದರು.
ಇವರು ಪತ್ನಿ, ಇಬ್ಬರು ಪುತ್ರರು, ಒರ್ವ ಪುತ್ರಿ ಯನ್ನು ಅಗಲಿದ್ದಾರೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button