Bidar

ಗ್ರಾಮ ಉದ್ಯೋಗ ವಿಕಾಸ ಯೋಜನೆ –ಕುಂಬಾರ ಸಶಕ್ತಿಕರಣ ಕೌಶಲ್ಯ ನವೀಕರಣ ತರಬೇತಿ ಕಾರ್ಯಕ್ರಮ

ಬೀದರ್,ಮಾ.20:- ಖಾದಿ ಮತ್ತು ಗ್ರಾಮ ಉದ್ಯೋಗ ಆಯೋಗ ಭಾರತ ಸರಕಾರವತಿಯಿಂದ ಗ್ರಾಮ ಉದ್ಯೋಗ ವಿಕಾಸ ಯೋಜನೆ ಕುಂಬಾರ ಸಶಕ್ತಿಕರಣ ಕೌಶಲ್ಯ ನವಿಕರಣ ತರಬೇತಿ ಕಾರ್ಯಕ್ರಮವನ್ನು ಗಾದಗಿ ಗ್ರಾಮದಲ್ಲಿ ದಿನಾಂಕ 19-3-2021ರಿಂದ 28-3-2021ರ ವರೆಗೆ ಹಮ್ಮಿಕೋಳ್ಳಲಾಗಿದೆ.

ತರಬೇತಿ ಕಾರ್ಯಕ್ರಮದಲ್ಲಿ ಗಾದಗಿ ಗ್ರಾಮದ ಸುಮಾರು 20 ಜನ ಕುಂಬಾರರಿಗೆ ಕೌಶಲ್ಯ ತರಬೇತಿ ನೀಡಲಾಗುವುದು.

ಇದರಿಂದ ಕುಂಬಾರಿಕೆ ಉತ್ತೇಜನ ನೀಡುವ ಜೋತೆಗೆ ಕುಂಬಾರರ ಆರ್ಥಿಕಮಟ್ಟ ಸುಧಾರಿಸಬಹುದು.

ತರಬೇತಿ ಪಡೆದ ಕುಂಬಾರರಿಗೆ ರಾಷ್ಟ್ರೀಕೃತ ಬ್ಯಾಂಕಿನ ಸಾಲಸೌಲಭ್ಯ ಒದಗಿಸಲಾಗುವುದು ಎಂದು ಖಾದಿ ಮತ್ತು ಗ್ರಾಮ ಉದ್ಯೋಗ ಅಧಿಕಾರಿಯಾದ ಶ್ರೀ ಮುರುಳಿ ಸರ್.

ಹುಬಳ್ಳಿ, ನೌಬಾದ ಕುಂಬಾರರ ಸಂಘದ ಅಧ್ಯಕ್ಷರಾದ ಶ್ರೀ ಬಾಬುರಾವ ಕುಂಬಾರ ಮಾತನಾಡಿ ತರಬೇತಿಯ ಸದುಪಯೋಗ ಪಡೆದುಕೊಳ್ಳಲು ತಿಳಿಸಿದರು.

ಸಭೆಯ ಬೀದರ ಖಾದಿ ಭಂಢಾರದ ಪ್ರಧಾನ ಕಾರ್ಯದರ್ಶಿ ಸಂಜುರೆಡ್ಡಿ ಇವರು ಮಾತನಾಡಿದರು.

ಕಾರ್ಯದರ್ಶಿ ಪಾಟೀಲ ಸರ್., ಜಿಲ್ಲಾ ಪಂಚಾಯಿತ ಬೀದರ ಮಾಜಿ ಲೆಕ್ಕಾಧಿಕಾರಿ ಬಸವರಾಜ ಕುಂಬಾರ ಮತ್ತು ಗಾದಗಿ ಗ್ರಾಮದ ಶಿವಕುಮಾರ ಕುಂಬಾರ ಇವರು ಮಾತನಾಡಿದರು.


ಧನ್ಯವಾದಗಳೋಂದಿಗೆ,
ಇಂತಿ ನಿಮ್ಮ ವಿಶ್ವಾಸಿ
ಬಾಬುರಾವ ಕುಂಬಾರ
ಕುಂಬಾರರ ಕರಕುಶಲ ಕೈಗಾರಿಕ ಸಹಕಾರ ಸಂಘ
ನೌಬಾದ ಬೀದರ ಮೋ: 9740467959

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button