ಭ್ರಷ್ಟಾಚಾರ ಮುಕ್ತ ಕಸಾಪ ರಚನೆ ನಮ್ಮ ಗುರಿ : ರಾಜಶೇಖರ ಮುಲಾಲಿ

ಮಡಿಕೇರಿ ಮಾ.20 : ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಬೇರೂರಿರುವ ಭ್ರಷ್ಟಾಚಾರದ ಬೇರುಗಳನ್ನು ಕಿತ್ತು ಹಾಕುವ ಗುರಿಯೊಂದಿಗೆ ಯುವ ಸಮುದಾಯವನ್ನು ಸಂಘಟಿಸಿ ಕನ್ನಡ ಭಾಷೆ ಮತ್ತು ಸಾಹಿತ್ಯ ಕ್ಷೇತ್ರವನ್ನು ಬೆಳೆಸುವ ಗುರಿಯೊಂದಿಗೆ ಕಸಾಪ ರಾಜ್ಯಾಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ತಾವು ಸ್ಪರ್ಧಿಸುತ್ತಿದ್ದು.

ಕೊಡಗಿನ ಮತದಾರರು ಸಂಪೂರ್ಣ ಸಹಕಾರ ನೀಡಬೇಕು ಅಣ್ಣಾ ಪೌಂಡೇಶನ್‍ನ ಸಂಸ್ಥಾಪಕ ಅಧ್ಯಕ್ಷ ಹಾಗೂ ಸಾಮಾಜಿಕ ಹೋರಾಟಗಾರ ರಾಜಶೇಖರ ಮುಲಾಲಿ ಮನವಿ ಮಾಡಿದ್ದಾರೆ.


ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಹೈದರಾಬಾದ್- ಕರ್ನಾಟಕ ಭಾಗವನ್ನು ಸರ್ಕಾರ ಕಲ್ಯಾಣ ಕರ್ನಾಟಕವೆಂದು ಗುರುತಿಸಿದ್ದು, ಈ ಭಾಗದ ಬಳ್ಳಾರಿ ಜಿಲ್ಲೆಯವÀನಾದ ನನ್ನನ್ನು ಗೆಲ್ಲಿಸುವ ಮೂಲಕ ಕಲ್ಯಾಣ ಕರ್ನಾಟಕಕ್ಕೆ ಅಧ್ಯಕ್ಷ ಸ್ಥಾನವನ್ನು ಕಲ್ಪಿಸಿಕೊಡಬೇಕೆಂದು ಕೋರಿದರು.


ನಾಡಿನ ಯುವ ಸಮುದಾಯವನ್ನು ಸಂಘಟಿಸಿ ಒಂದು ಸಶಕ್ತ ಕನ್ನಡ ಪಡೆಯ ಸಾಹಿತ್ಯ ಪರಿಷತ್ತನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಉದ್ದೇಶದೊಂದಿಗೆ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದೇನೆ.

ಕನ್ನಡ ನಾಡು ಹಲವು ಜ್ವಲಂತ ಸಮಸ್ಯೆಗಳನ್ನು ಎದುರಿಸುತ್ತಿದೆ. ಗಡಿ ಗಲಾಟೆ, ಅಂತರಾಜ್ಯ ನೆಲ-ಜಲ ವಿವಾದಗಳು, ಖಾಸಗಿ ವಲಯದಲ್ಲಿ ಕನ್ನಡಿಗರ ಉದ್ಯೋಗದ ಸಮಸ್ಯೆ, ಗಡಿ ಭಾಗದ ಕನ್ನಡ ಶಾಲೆಗಳ ದು:ಸ್ಥಿತಿ ಸೇರಿದಂತೆ ಹಲವು ಸಮಸ್ಯೆಗಳು ಕರ್ನಾಟಕವನ್ನು ಕಾಡುತ್ತಿದೆ.


ಇವುಗಳ ಪರಿಹಾರಕ್ಕೆ ಆಳುವ ಸರ್ಕಾರಗಳನ್ನು ಬಡಿದೆಬ್ಬಿಸುವ ಪ್ರಾಮಾಣಿಕ ಪ್ರಯತ್ನ ಸಾಹಿತ್ಯ ಪರಿಷತ್ತಿನಿಂದ ಆಗುತ್ತಿಲ್ಲ. ಪಾರದರ್ಶಕ ಆಡಳಿತ ವೈಖರಿ ಮಾಯವಾಗಿ ಭ್ರಷ್ಟಾಚಾರದ ಚಿಗುರು ಸಾಹಿತ್ಯ ಪರಿಷತ್ತಿನ ಅಂಗಳದಲ್ಲಿ ದೊಡ್ಡ ಹೆಮ್ಮರವಾಗಿ ಬೆಳೆದಿದೆ.

ಇದೇ ಕಾರಣಕ್ಕೆ ಯುವ ಜನಾಂಗ ಹಾಗೂ ಇಚ್ಛಾಶಕ್ತಿಯುಳ್ಳ ಸಾಹಿತ್ಯಕ ಕೃಷಿಯಲ್ಲಿ ತೊಡಗಿರುವ ಯುವ ಪ್ರತಿಭೆಗಳು ಸಾಹಿತ್ಯ ಪರಿಷತ್ತಿನ ಯಾವೊಂದು ವಲಯದಲ್ಲಿಯೂ ಗುರುತಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲವೆಂದು ರಾಜಶೇಖರ ಮುಲಾಲಿ ಆರೋಪಿಸಿದರು.


ಸಾಹಿತ್ಯ ಪರಿಷತ್ತನ್ನು ಕೇವಲ ಒಂದು ಸಂಸ್ಥೆಯಾಗಿ ನೋಡದೆ ಸರ್ವ ಕನ್ನಡಿಗರ ಅಸ್ಮಿತೆಯಾಗಿ ರೂಪಿಸುವ ಪ್ರಾಮಾಣಿಕ ಆಶಯಗಳಿಗೆ ಪೂರಕವಾಗಿ ದುಡಿಯಲು ನಾನು ಬದ್ಧನಾಗಿದ್ದೇನೆ.

ಕಸಾಪವನ್ನು ಡಿಜಿಟಲೀಕರಣಗೊಳಿಸಿ ನಾಡಿನ ಮೂಲೆ ಮೂಲೆಯ ಜನರಿಗೆ ಕನ್ನಡ ಸಾಹಿತ್ಯವನ್ನು ತಲುಪಿಸುವ ಯೋಜನೆ.

ಗಡಿನಾಡ ಕನ್ನಡಿಗರ ರಕ್ಷಣೆಗೆ ಕಾನೂನು ನೆರವು, ಖಾಸಗಿ ವಲಯದಲ್ಲಿ ಕನ್ನಡಿಗರ ಉದ್ಯೋಗದ ಮೀಸಲಾತಿ ಜಾರಿಗೆ ಬೃಹತ್ ಹೋರಾಟ ರೂಪಿಸುವ ಯೋಚನೆಗಳೊಂದಿಗೆ ಬಹುಮುಖ್ಯವಾಗಿ ಭ್ರಷ್ಟಾಚಾರ ಮುಕ್ತ ಸಾಹಿತ್ಯ ಪರಿಷತ್ತು ನಮ್ಮ ಗುರಿಯಾಗಿದೆ ಎಂದರು.


ಸಮಾಜಮುಖಿ, ಜಾತ್ಯಾತೀತ ಮತ್ತು ಭ್ರಷ್ಟಾಚಾರ ಮುಕ್ತವಾಗಿ ಸಾಹಿತ್ಯ ಪರಿಷತ್ತನ್ನು ಕೊಂಡೊಯ್ಯುವ ಕನಸು ಹೊತ್ತಿರುವ ಎಲ್ಲಾ ವರ್ಗದ ಮನಸ್ಸುಗಳು ನಮ್ಮೊಂದಿಗೆ ಕೈಜೋಡಿಸಬೇಕೆಂದು ಹೇಳಿದರು.


ಕೊಡಗಿನ ಗಾಂಧಿ ಎಂದೇ ಗುರುತಿಸಿಕೊಳ್ಳುತ್ತಿದ್ದ ಪಂದ್ಯಂಡ ಬೆಳ್ಳಿಯಪ್ಪ, ಫೀಲ್ಡ್ ಮಾರ್ಷಲ್ ಕಾರಿಯಪ್ಪ, ಜನರಲ್ ತಿಮ್ಮಯ್ಯ, ಲೆಫ್ಟಿನೆಂಟ್ ಜನರಲ್ ಅಯ್ಯಪ್ಪ, ಹಾಕಿ ಕ್ರೀಡೆಯ ಎಂ.ಪಿ.ಗಣೇಶ.

ಟೆನಿಸ್ ಆಟಗಾರ ರೋಹನ್ ಬೋಪಣ್ಣ ರವರಂತಹ ಮಹನಿಯರನ್ನು ಕನ್ನಡ ನಾಡಿಗೆ ಕೊಡುಗೆಯಾಗಿ ನೀಡಿದ ಕೀರ್ತಿಯು ಕೊಡಗು ಜಿಲ್ಲೆಗೆ ಸೇರಬೇಕಾಗುತ್ತದೆ.

ಅತ್ಯಂತ ವಿಶೇಷ ಸಾಂಸ್ಕೃತಿಕ ಹಿನ್ನೆಲೆ ಹೊಂದಿರುವ ಕೊಡಗು ಜಿಲ್ಲೆಯಲ್ಲಿ ವೃತ್ತಿ ರಂಗಭೂಮಿ ಶೈಲಿಯ ಯಯಾತಿ ರಾಜಂಡ ನಾಟಕ, ಸತಿ ಸಾವಿತ್ರಿ, “ಶ್ರೀಕಾವೇರಿ ಮಹಾತ್ಮೆ” ರಚಿಸಿದ ಅಪ್ಪಚ್ಚ ಕವಿ.

ಕೊಡವರ ಜೀವನ ಶೈಲಿ ಕುರಿತು ‘ಪಟ್ಟೋಲೆ ಪಳಮೆ’ ಗ್ರಂಥ ರಚಿಸಿದ ನಡಿಕೇರಿಯಂಡ ಚಿಣ್ಣಪ್ಪ, ಸಾಹಿತಿಗಳಾದ ಚಂಗಪ್ಪ, ಬಾಚಮಾಡ ಗಣಪತಿ, ಡಾ.ಕೊರವಂಡ ಅಪ್ಪಯ್ಯ0

ಪಾಂಡಂಡ ಮುತ್ತಣ್ಣ ನವರಂತಹ ಪ್ರಮುಖ ಬರಹಗಾರರು ತಮ್ಮ ತಮ್ಮ ಸಾಹಿತ್ಯ ಕೃಷಿಯ ಮೂಲಕ ಹೆಸರುವಾಸಿಯಾಗಿದ್ದಾರೆ.


ಇಂತಹ ಮಹತ್ವದ ಸಾಂಸ್ಕೃತಿಕ ಹಿನ್ನೆಲೆ ಹೊಂದಿರುವ ಕೊಡಗು ಜಿಲ್ಲೆಯ ಸಾಹಿತ್ಯ ಪರಿಷತ್ತಿನ ಮತದಾರರು ನನ್ನ ಜನಪರ ಮತ್ತು ಭ್ರಷ್ಟಾಚಾರ ಮುಕ್ತ ಚಿಂತನೆಯನ್ನು ಪರಿಗಣಿಸಿ ನನಗೆ ಮತ ನೀಡಿ ಸಹಕರಿಸಬೇಕೆಂದು ರಾಜಶೇಖರ ಮುಲಾಲಿ ಮನವಿ ಮಾಡಿದರು.


ಸುದ್ದಿಗೋಷ್ಠಿಯಲ್ಲಿ ಅಣ್ಣಾ ಪೌಂಡೇಶನ್‍ನ ಕಾರ್ಯದರ್ಶಿ ದುರುಗೇಶ್ ಉಪ್ಪಾರ್, ಸದಸ್ಯರುಗಳಾದ ದತ್ತ ಹಾಗೂ ರಾಜೇಶ್ ಉಪಸ್ಥಿತರಿದ್ದರು.


::: ಪ್ರಣಾಳಿಕೆ :::

ಭ್ರಷ್ಟಾಚಾರ ಮುಕ್ತ ಹಾಗೂ ಪಾರದರ್ಶಕ ಕನ್ನಡ ಸಾಹಿತ್ಯ ಪರಿಷತ್ತು ನಿರ್ಮಾಣದ ಗುರಿ, ಕ.ಸಾ.ಪ ರಾಜ್ಯಮಟ್ಟದ ಮಹಿಳಾ ಘಟಕ ಪ್ರಾರಂಭಿಸಿ ಮಹಿಳೆಯರಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು.

ಮಹಿಳಾ ಸಾಧಕರನ್ನು ಗುರುತಿಸಿ, ಗೌರವಿಸಿ, ಅಭಿನಂದಿಸಿ ಪುರಸ್ಕರಿಸುವುದು.


ಕನ್ನಡ ಸಾಹಿತ್ಯ ಪರಿಷತ್ತಿಗೆ ಡಿಜಿಟಲ್ ಸ್ಪರ್ಶ ನೀಡಿ, ಸರ್ವ ಸದಸ್ಯರಿಗೆ (ಸ್ಮಾರ್ಟ್ ಕಾರ್ಡ್) ಗುರುತಿನ ಚೀಟಿ ನೀಡುವುದು ಹಾಗೂ ಸಮ್ಮೇಳನಗಳಿಗೆ ಹಾಜರಾಗುವ ವಾಹನಗಳಿಗೆ ಉಚಿತ ಟೋಲ್ ವ್ಯವಸ್ಥೆ ಮಾಡುವುದು.

ರಾಜ್ಯದ ಪ್ರತಿ ಜಿಲ್ಲೆ/ತಾಲೂಕುಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿಗೆ ಸ್ವಂತ ‘ಕನ್ನಡ ಭವನ’ ನಿರ್ಮಾಣ ಮಾಡುವುದು.

ಜಿಲ್ಲೆಗಳಿಂದ ಕೇಂದ್ರ ಕಛೇರಿಗೆ ಆಗಮಿಸುವ ಆಜೀವ ಸದಸ್ಯರಿಗೆ ಅಲ್ಪ ವಿರಾಮ (ರಿಫ್ರೆಶ್) ಕ್ಕೆ ವ್ಯವಸ್ಥೆ ಮಾಡುವುದು.


ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷರುಗಳು, ಪದಾಧಿಕಾರಿಗಳು, ಹಿರಿಯ ಸದಸ್ಯರನ್ನು ಗುರುತಿಸಿ ಕೇಂದ್ರ ಮತ್ತು ಜಿಲ್ಲಾ ಮಟ್ಟದಲ್ಲಿ ಗೌರವಿಸಿ ಸಲಹಾ ಸಮಿತಿ ರಚಿಸುವುದು. (ಕನಿಷ್ಠ ಸದಸ್ಯರಾಗಿ 20 ವರ್ಷ ಪೂರೈಸಿದವರು)


ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರ ಪ್ರತಿಭಾವಂತ ಮಕ್ಕಳ ಕನ್ನಡ ಮಾಧ್ಯಮದಲ್ಲಿ ಉನ್ನತ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿಧ್ಯಾರ್ಥಿ ವೇತನ ನೀಡಿ ಪೆÇ್ರೀತ್ಸಾಹಿಸುವುದು.

ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆದವರಿಗೆ ಸರ್ಕಾರಿ ಉದ್ಯೋಗದಲ್ಲಿ ಮೀಸಲಾತಿ ಹೆಚ್ಚಿಸುವುದು ಮತ್ತು ವಲಯದಲ್ಲಿ ಉದ್ಯೋಗ ಮೀಸಲಾತಿಗಾಗಿ ಒತ್ತಾಯಿಸುವುದು.

ಖಾಸಗಿ ಕನ್ನಡ ನಾಡು, ನುಡಿ, ಸಾಹಿತ್ಯ, ಭಾಷೆ, ನೆಲ, ಜಲದ ಪರ ಹೋರಾಟಗಾರರು, ಕನ್ನಡಪರ ಚಿಂತಕರು, ಸಾಧಕರು ಹಾಗೂ ಹಿರಿಯ ಪತ್ರಕರ್ತರನ್ನು ಗುರುತಿಸಿ ಪುರಸ್ಕರಿಸುವುದು.

ಕನ್ನಡ ಸಾಹಿತ್ಯ ಪರಿಷತ್ತಿನ ಸರ್ವಾಂಗೀಣ ಅಭಿವೃದ್ದಿಗಾಗಿ ವಲಯವಾರು ಗೌರವ ಕಾರ್ಯದರ್ಶಿಗಳನ್ನಾಗಿ ನೇಮಕ ಮಾಡುವುದು ಮತ್ತು ಕನ್ನಡ ಸಾಹಿತ್ಯ ಪುಸ್ತಕಗಳ ಮುದ್ರಣಕ್ಕೆ ಉತ್ತೇಜನ ನೀಡುವುದು.

ಕರ್ನಾಟಕದ ಗಡಿ ಭಾಗಗಳ ಹಾಗೂ ಏಕೀಕರಣಕ್ಕಾಗಿ ಹೋರಾಡಿದ ಹುತಾತ್ಮರ ಸ್ಮರಣೆಯಲ್ಲಿ ಕಿರು ಪುಸ್ತಕಮಾಲೆ ಪ್ರಾರಂಭಿಸುವ ಗುರಿ.

ಕೇಂದ್ರ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ರಾಜ್ಯದ ಎಲ್ಲಾ ಜಿಲ್ಲಾ/ತಾಲೂಕು ಪ್ರವಾಸ ಕೈಗೊಂಡು ಕನ್ನಡ ಸಾಹಿತ್ಯ ಪರಿಷತ್ತು ಅಭಿವೃದ್ಧಿಗೆ ಶ್ರಮಿಸುವುದು. ವೈಯಕ್ತಿಕ ಪ್ರವಾಸ ಮತ್ತು ಕಾರ್ಯಗಳಿಗೆ ಪರಿಷತ್ತಿನ ಹಣ ಹಾಗೂ ವಾಹನ ಉಪಯೋಗಿಸದಿರಲು ನಿರ್ಧರಿಸಲಾಗಿದೆ.


ಕನ್ನಡ ಸಾಹಿತ್ಯ ಪರಿಷತ್ತಿನ ಹಾಲಿ ಉದ್ದೇಶಗಳನ್ನು ಮುಂದುವರೆಸುತ್ತಾ ಈ ಮೇಲಿನ ಎಲ್ಲ ಪ್ರಣಾಳಿಕೆಯ ಅಂಶಗಳ ಜಾರಿಗೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಫೋಟೋ :: ಕಸಾಪ

Latest Indian news

Popular Stories