Crime

ಬಳ್ಳಾರಿ: ಭತ್ತದಲ್ಲಿ ಕಣೆ ನೊಣ ಕೀಟ ಹಾನಿ ಮತ್ತು ಹತೋಟಿ ಕ್ರಮಗಳು

ಬಳ್ಳಾರಿ,ಅ.05: ಭತ್ತದಲ್ಲಿ ಕಣೆ ನೋಟ ಕೀಟ ಹಾನಿ ಮತ್ತು ಹತೋಟಿಗೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ರಾಯಚೂರು ಕೃಷಿ ವಿಶ್ವವಿದ್ಯಾಲಯದ ಸಂಶೋಧನಾ ನಿರ್ದೇಶಕ ಡಾ.ಬಿ.ಕೆ.ದೇಸಾಯಿ ಅವರು ಪತ್ರಿಕ ಪ್ರಕಟಣೆ ಬಿಡುಗಡೆ ಮಾಡಿದ್ದು,ಅದರ ವಿವರ ಇಂತಿದೆ.
ಭತ್ತದ ಕಣದ ನೋಟ ಕೀಟವು ಸಾಮಾನ್ಯವಾಗಿ ಕರಾವಳಿ ಹಾಗೂ ಮಲೆನಾಡು ಪ್ರದೇಶದಲ್ಲಿ ಬೆಳೆಯುವ ಭತ್ತದ ಬೆಳೆಗೆ ಪ್ರತಿ ವರ್ಷ ಕಾಣಿಸಿಕೊಳ್ಳುತ್ತದೆ. ಕರ್ನಾಟಕದ ಒಳನಾಡಿನ ಬಯಲು ಸೀಮೆಯ ಪ್ರದೇಶದಲ್ಲಿ ಬೆಳೆಯುವ ಭತ್ತದಲ್ಲಿ ಕಂಡು ಬರುವುದು ಅಪರೂಪ. ಆದರೆ ಪ್ರಸ್ತುತ ಮುಂಗಾರು ಹಂಗಾಮಿನಲ್ಲಿ ತುಂಗಭದ್ರಾ ಅಚ್ಚು ಕಟ್ಟು ಪ್ರದೇಶದ ಗಂಗಾವತಿ, ಸಿರುಗುಪ್ಪ, ಕಂಪ್ಲಿ, ಮಸ್ಕಿ ಹಾಗೂ ಸಿಂಧನೂರು ತಾಲೂಕುಗಳಲ್ಲಿ ಬೆಳೆದಿರುವ ಭತ್ತದ ಬೆಳೆಗೆ ಇದರ ಬಾಧೆ ಅಲ್ಲಲ್ಲಿ ಕಾಣಿಸಿಕೊಂಡು, ರಾಶಿಗೆ ಆರ್ಥಿಕವಾಗಿ ಹಾನಿಯನ್ನುಂಟು ಮಾಡಿರುತ್ತದೆ. ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ರಾಯಚೂರು ಸಂಶೋಧನಾ ನಿರ್ದೇಶನಾಲಯದ ಹಿರಿಯ ಕೀಟ ತಜ್ಞರಾದ ಡಾ. ಎಂ. ಭೀಮ ಇವರ ನೇತೃತ್ವದಲ್ಲಿ ಸದರಿ ಕೀಟ ಬಗ್ಗೆ ಸಮೀಕ್ಷೆ ನಡೆಸಿ, ಹತೋಟಿ ಕ್ರಮಗಳನ್ನು ಶಿಫಾರಸ್ಸು ಮಾಡಲು ವಿಜ್ಞಾನಿಗಳ ತಂಡವನ್ನು ರಚಿಸಿತು. ವಿಜ್ಞಾನಿಗಳ ತಂಡವು ತುಂಗಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ಬೆಳೆದ ಭತ್ತದ ತಾಕುಗಳಿಗೆ ಭೇಟಿ ನೀಡಿ ಕೀಟದ ಸಮೀಕ್ಷೆಯನ್ನು ನಡೆಸಿ. ಸದರಿ ಸಮೀಕ್ಷೆಯ ಪ್ರಕಾರ ಪ್ರತಿ ಭತ್ತದ ತೊಂಡೆಗೆ ಶೇ.10 ರಿಂದ ಶೇ.30 ರಷ್ಟು ಹಾನಿಯಾಗಿರುವ ಲಕ್ಷಣಗಳು ಕಂಡು ಬಂದಿರುತ್ತವೆ. ಪ್ರಮುಖವಾಗಿ ಕೀಟದಿಂದ ತಗುಲಿದ ಹಾನಿಯು ಆರ್‍ಎನ್ ಆರ್-15048 ಮತ್ತು ಗಂಡು ಸೇನಾ ತಳಿಗಳ ತಾಕುಗಳಲ್ಲಿ ಹೆಚ್ಚಾಗಿ ಕಂಡು ಬಂದಿರುತ್ತದೆ. ಅಲ್ಲದೇ, ಹಾನಿಯ ಪ್ರಮಾಣ ಹೆಚ್ಚಾಗಿ 30 ರಿಂದ 55 ದಿನಗಳ ಅವಧಿಯಲ್ಲಿರುವ ಭತ್ತದ ತಾಕಿ ಕಾಣಿಸಿಕೊಂಡಿರುತ್ತದೆ.
ಸೊಳ್ಳೆಯಂತೆ ಕಾಣುವ ಪ್ರೌಢ ಹೆಣ್ಣು ಕೀಟವು ತನ್ನ ಜೀವಿತಾವಧಿಯಲ್ಲಿ 100-200 ಮೊಟ್ಟೆಗಳನ್ನು ಒಂದೊಂದಾಗಿ ಎಲೆಯ ಮೇಲೆ ಇಡುತ್ತದೆ. ಮೂರರಿಂದ ನಾಲ್ಕು ದಿನಗಳ ನಂತರ ಹೊರಬರುವ ಮರಿಹುಳು ಸುಳಿಯ ಒಳಗೆ ಸೇರಿಕೊಂಡು ಬೆಳೆಯುವ ಕುಡಿಯನ್ನು ಕೆರೆದು ತಿನ್ನುತ್ತದೆ. ಸುಳಿಯಿಂದ ಹೊರ ಬರುವ ಎಲೆಗಳು ಕೊಳವೆಯಂತೆ ಮಾರ್ಪಾಡುಗೊಂಡು ಗಿಡಗಳ ಬೆಳವಣಿಗೆ ನಿಂತು ಹೋಗುತ್ತದೆ ಹಾಗೂ 30 ರಿಂದ 60 ದಿನಗಳ ಅವಧಿಯ ಬೆಳೆಗೆ ಹೆಚ್ಚಾಗಿ ಹಾನಿಗೊಳಗಾಗುತ್ತದೆ.
ಕಣೆ ನೋಣದ ಹತೋಟಿಗಾಗಿ ರೈತರು ಪ್ರತಿ ಎಕರೆ ಬತ್ತದ ಶಾಕಿಗೆ 10 ಕಿ.ಗ್ರಾಂ. ಫಿಪೆÇ್ರೀನಿಲ್ 0.3 ಜಿಆರ್ ಹರಳನ್ನು ಮಣ್ಣಿಗೆ ಹಾಕಬೇಕು ಅಥವಾ 0.3 ಗ್ರಾಂ ಥೈಯಾಮಿಥಾಕ್ಸಮ್ 25 ಡಬ್ಲೂ ಜಿ ಕೀಟನಾಶಕವನ್ನು ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು. ಸಿಂಪಡಣೆಗೆ ಮುಂಚೆ ಗದ್ದೆಯಲ್ಲಿ ನೀರು ತೆಗೆದು, ಸಿಂಪಡಣೆ ದ್ರಾವಣ ಭತ್ತದ ಬುಡಕ್ಕೆ ಬೀಳುವಂತೆ ಸಿಂಪಡಿಸಬೇಕು. ರೈತರು ಗಮನಿಸಬೇಕಾದ ಇನ್ನೊಂದು ಮಾಹಿತಿ ಅಂದರೆ, 60 ದಿನಗಳ ಅವಧಿಯ ನಂತರ ಭತ್ತದ ಬೆಳೆಗೆ ಈ ಕೀಟದ ಹತೋಟಿಗೆ ಯಾವುದೇ ಸಿಂಪಡಣೆ ಕೈಗೊಳ್ಳುವ ಅವಶ್ಯಕತೆ ಇರುವುದಿಲ್ಲ.
ಭತ್ತದ ಕಣೆ ಹುಳುವಿನ ಜೊತೆ ಅಲ್ಲಲ್ಲಿ ದಂಡಾಣು ರೋಗ, ಕಾಡಿಗೆ ರೋಗ ಹಾಗೂ ಕಾಂಡ ಕೊಳೆ ರೋಗಗಳು ಕಂಡು ಬಂದಿರುತ್ತದೆ. ದುಂಡಾಣು ರೋಗದ ಹತೋಟಿಗೆ 0.1 ಗ್ರಾಂ ಸ್ಟ್ರೆÀ್ಪμÉ್ಟೂಸೈಕ್ಲಿನ್ + 0 ಗ್ರಾಂ ಮೈಲುತುತ್ತೆ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು, ಕಾಡಿಗೆ ರೋಗದ ಹತೋಟಿಗಾಗಿ ಮುಂಜಾಗೃತಾ ಕ್ರಮವಾಗಿ ಭತ್ತದ ಹೂವಾಡುವ ಮೊದಲು ಸಂಯುಕ್ತ ಶಿಲೀಂದ್ರ ನಾಶಕದ 0.4 ಗ್ರಾಂ ಟಿಬ್ಯುಕೊನಾಝೋಲ್ ಶೇ 50 ರಷ್ಟು ಟೈಫೈ ಕ್ಷಿಪೆÇ್ಲೀಬಿನ್ ಶೇ25 ರಷ್ಟು ಡಬ್ಲ್ಯು ಜಿ ಅಥವಾ 1.0 ಮಿಲಿ. ಪೆÇ್ರಪಿಕೊನಜೋಲ್ ಶಿಲೀಂದ್ರನಾಶಕವನ್ನು ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಣೆ ಮಾಡಬೇಕು, ಕಾಂಡ ಕೊಳೆ ರೋಗ ನಿರ್ವಹಣೆಗೆ 1.5 ಮಿ.ಲೀ ಥೈಯಾಪ್ಲುಜಮೈಡ್ ಅಥವಾ 1.0 ಗ್ರಾಂ ಥೈಯಾಫÀನಟ್ ಮಿಥೈಲ್ ಶೀಲಿಂದ್ರನಾಶಕವನ್ನು ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು ಎಂದು ಅವರು ತಿಳಿಸಿದ್ದಾರೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button