
Crime
ಬಳ್ಳಾರಿ: 30 ದಿನಗಳ ಕೌಶಲ್ಯ ತರಬೇತಿ
ಬಳ್ಳಾರಿ,ಅ.04:- ಕರ್ನಾಟಕ ಉದ್ಯಮಶೀಲತಾಭಿವೃದ್ಧಿ ಕೇಂದ್ರ (ಸಿಡಾಕ್) ವತಿಯಿಂದ ಕಾಸ್ಮೆಟೋಲಾಜಿ & ಬ್ಯೂಟಿಷಿಯನ್ ಕುರಿತಾದ 30 ದಿನಗಳ ಕೌಶಲ್ಯ ತರಬೇತಿಗೆ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರಾದ ಬಿ.ಸೋಮಶೇಖರ ಅವರು ಜಿಲ್ಲಾ ಕೈಗಾರಿಕಾ ಕೇಂದ್ರದ ಆವರಣದಲ್ಲಿ ಶನಿವಾರ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ತರಬೇತಿಗೆ ಹಾಜರಾಗಿರುವವರು ತರಬೇತಿಯ ಸದುಪಯೋಗಪಡಿಸಿಕೊಂಡು ತಮ್ಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಸಿಡಾಕ್ ಜಂಟಿ ನಿರ್ದೇಶಕರಾದ ಜಿ. ಯು.ಹುಡೇದ್, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಕೈಗಾರಿಕಾ ವಿಸ್ತರಣಾಧಿಕಾರಿಗಳಾದ ವಿಜಯಕುಮಾರ, ಡೇ-ನಲ್ಮ್ ವ್ಯವಸ್ಥಾಪಕರಾದ ಲಕ್ಷ್ಮೀ, ಹಿರಿಯ ಸಂಪನ್ಮೂಲ ವ್ಯಕ್ತಿಗಳಾದ ಪ್ರಸನ್ನ ಟಿ.ಎನ್.ಎಂ ಹಾಗೂ ಕೌಶಲ್ಯ ತರಬೇತುದಾರರಾದ ರೆಹನಾ ಸುಲ್ತಾನಾ ಸೇರಿದಂತೆ ಇತರರು ಇದ್ದರು.




