Crime
ರಾಯಚೂರು: ಕಮ್ಮಟಗಳಿಗೆ ಅರ್ಜಿ ಆಹ್ವಾನ
ರಾಯಚೂರು,ಅ.05:- ಕರ್ನಾಟಕ ಸಾಹಿತ್ಯ ಅಕಾಡೆಮಿಯು ಕೊರೋನಾ ಲಾಕ್ ಡೌನ್ ಪ್ರಕ್ರಿಯೆಗಳು ಪೂರ್ಣಗೊಂಡ ನಂತರ ರಾಜ್ಯಮಟ್ಟದ ಮೂರು ದಿನಗಳ ಕಥಾ ಕಮ್ಮಟ, ಲಲಿತ ಪ್ರಬಂಧ ಕಮ್ಮಟ, ವಿಜ್ಞಾನ ಸಾಹಿತ್ಯ ಕಮ್ಮಟ ಹಾಗೂ ಸಾಹಿತ್ಯ ಮತ್ತು ಸಾಮಾಜಿಕ ಜಾಲತಾಣ ಕಮ್ಮಟ ಸೇರಿ ನಾಲ್ಕು ಕಮ್ಮಟಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತ, 20 ರಿಂದ 45 ವರ್ಷದೊಳಗಿನ ರಾಜ್ಯದ ಎಲ್ಲ ಭಾಗದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. 2020 ಅ.10ರೊಳಗಾಗಿ ಅರ್ಜಿ ಸಲ್ಲಿಸಬೇಕು. ಪ್ರತಿ ವಿಭಾಗದ ಕಮ್ಮಟಕ್ಕೆ ಪ್ರತ್ಯೇಕವಾಗಿ ಅರ್ಜಿ ಸಲ್ಲಿಸಬೇಕಾಗಿರುತ್ತದೆ. ಆಸಕ್ತ ಅಭ್ಯರ್ಥಿಗಳು ಕರ್ನಾಟಕ ಸಾಹಿತ್ಯ ಅಕಾಡೆಮಿಯ ವೆಬ್ಸೈಟ್ http://karnatakakasahithyaacademy.org ಮೂಲಕ ಅರ್ಜಿ ಸಲ್ಲಿಸಬೇಕೆಂದು ರಿಜಾಸ್ಟ್ರಾರ್ ಕರಿಯಪ್ಪ ಎನ್. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




