ಆಟೋ ಪಲ್ಟಿ: ಓರ್ವ ಮಹಿಳೆ ಸಾವು, 14 ಜನರಿಗೆ ಗಾಯ

ತಾಲ್ಲೂಕಿನ ದೇವಗಿರಿ ತಾಂಡಾದ ಬಳಿ ಇಳಿಜಾರಿನಲ್ಲಿ ಆಟೋ ಪಲ್ಟಿಯಾಗಿ ಓರ್ವ ಮಹಿಳೆ ಸಾವನಪ್ಪಿ, 14 ಜನರು ಗಂಭೀರವಾಗಿ ಗಾಯಗೊಂಡಿರುವ ದುರ್ಘಟನೆ ಮಂಗಳವಾರ ಸಂಜೆ ಜರುಗಿದೆ.

ಮೃತಪಟ್ಟವರನ್ನು ಕಿಲ್ಲರ್ಗಿ ಗ್ರಾಮದ ಇಂದ್ರಮ್ಮ ರಾಮಚಂದ್ರ (57) ಎಂದು ಗುರುತಿಸಲಾಗಿದೆ.

ಗಾಯಗೊಂಡವರನ್ನು ಆಂಬ್ಯುಲೆನ್ಸ್ ಹಾಗೂ ಇನ್ನಿತರ ವಾಹನಗಳ ಮೂಲಕ ಮನ್ನಾಎಖೇಳಿ ಸರ್ಕಾರಿ ಸಮುದಾಯ ಅರೋಗ್ಯ ಕೇಂದ್ರಕ್ಕೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಗಾಯಗೊಂಡವರಲ್ಲಿ ನಾಲ್ಕು ಜನರ ಸ್ಥಿತಿ ಗಂಭೀರವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಬೀದ‌ರ್ ಸರ್ಕಾರಿ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ಮನ್ನಾಎಖೇಳಿ ಆಸ್ಪತ್ರೆ ಮೂಲಗಳು ತಿಳಿಸಿವೆ.

ಬೀದರ್ ದಕ್ಷಿಣ ಮತಕ್ಷೇತ್ರದ ಸಿಂದೊಲ್, ಕೋಳಾರ್ (ಕೆ). ಚಿಲ್ಲರ್ಗಿ ಗ್ರಾಮಗಳ ಒಂದೇ ಕುಟುಂಬದ ಸದಸ್ಯರು ದೇವಗಿರಿಯ ಪ್ರಸಿದ್ಧ ಶ್ರೀ ದುರ್ಗಮ್ಮ ದೇವಿಯ ದರ್ಶನ ಮುಗಿಸಿಕೊಂಡು ವಾಪಸ್ ತಮ್ಮ ಗ್ರಾಮಕ್ಕೆ ತೆರಳುವಾಗ ಇಳಿಜಾರಿನಲ್ಲಿ ಆಟೋ ಚಾಲಕನ ನಿಯಂತ್ರಣ ತಪ್ಪಿ ಈ ಅವಘಡ ಸಂಭವಿಸಿದೆ.

ಸ್ಥಳಕ್ಕೆ ಬೆಮಳಖೇಡ ಪೊಲೀಸರು ಭೇಟಿ ನೀಡಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ.

Latest Indian news

Popular Stories