ಕೆರೆಯಲ್ಲಿ ನಾಪತ್ತೆಯಾಗಿದ್ದ ವ್ಯಕ್ತಿ 4 ದಿನಗಳ ಬಳಿಕ ಶವ ಪತ್ತೆಹಚ್ಚಿದ ಎನ್‌ಡಿಆರ್‌ಎಫ್ ತಂಡ.

ಬಸವಕಲ್ಯಾಣ ತಾಲ್ಲೂಕಿನ ಹಾಮುನಗರ ತಾಂಡಾದ ನಿವಾಸಿ ಪಾಂಡುರಂಗ ಭಾನುವಾರ ಗೆಳೆಯರೊಂದಿಗೆ ಹತ್ಯಾಳ ಗ್ರಾಮದ ಕೆರೆಯಲ್ಲಿ ಮೀನು ಹಿಡಿಯಲು ಹೋಗಿದ್ದ ಆದರೆ ಈಜು ಬಾರದ ಕಾರಣ ಒಳಗೆ ಮುಳುಗಿ ನಾಪತ್ತೆಯಾಗಿದ್ದ,ಈ ಹಿನ್ನಲೆಯಲ್ಲಿ ಬಸವಕಲ್ಯಾಣ ತಾಲ್ಲೂಕಿನ ಮುಡುಬಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿದ್ದು,ಬಸವಕಲ್ಯಾಣ ಮತ್ತು ಬೀದರ್ ಅಗ್ನಿಶಾಮಕ ದಳದವರು ಎರಡು ದಿನ ಹುಡುಕಿದರೂ ಶವ ಸಿಗಲಿಲ್ಲ ಎನ್‌ಡಿಆರ್‌ಎಫ್ ತಂಡದವರಿಗೆ ಪತ್ತೆ ಕಾರ್ಯ ಒಪ್ಪಿಸಲಾಗಿತ್ತು.

ಕಲಬುರಗಿ ಯಿಂದ ಬಂದಿದ್ದ ಎನ್‌ಡಿಆರ್‌ಎಫ್ ತಂಡ ಕೆರೆಯಲ್ಲಿ ಹುಡುಕಾಟ ನಡೆಸಿ ಶವ ಪತ್ತೆಹಚ್ಚಿದೆ.

Latest Indian news

Popular Stories