ಎರಡು ಬೈಕ್ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಒರ್ವ ಸವಾರ ಮೃತಪಟ್ಟಿದ್ದಾನೆ.
ಮೃತಪಟ್ಟ ಸವಾರ ಸಂತೋಷ್ (30) ಎಂದು ಗುರುತಿಸಲಾಗಿದೆ.
ಮೃತ ದುರ್ದೈವಿ ಸಂತೋಷ್ ಹುಣಸೂರು ಮೂಲದ ನಿವಾಸಿ
ಮತ್ತೊಬ್ಬ ಸವಾರ ಕೆದಕಲ್ ನಿವಾಸಿ ಚೇತನ್ (35) ಗಂಭೀರ ಗಾಯಗೊಂಡಿದ್ದಾರೆ.
ಸುಂಟಿಕೊಪ್ಪ ಸಮೀಪದ 7 ನೇ ಮೈಲು ಗ್ರಾಮದ ಸಮೀಪ ಘಟನೆ ನಡೆದಿದ್ದು ಗಂಭೀರ ಗಾಯವಾಗಿದ್ದ ಚೇತನ್ ಅವರನ್ನು ಮಡಿಕೇರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು