ಕುಂದಾಪುರ: ತ್ರಾಸಿ ಅಂಬಾ ಟಿವಿ ಸೆಂಟರ್‌ನಲ್ಲಿ ಬೆಂಕಿ ಅವಘಡ

ಕುಂದಾಪುರ: ಕುಂದಾಪುರ ತಾಲೂಕಿನ ತ್ರಾಸಿ ರಾಷ್ಟ್ರೀಯ ಹೆದ್ದಾರಿ 66ರ ತ್ರಾಸಿ ಅಂಬಾ ಟಿವಿ ಸೆಂಟರ್ ಶಾರ್ಟ್ ಸರ್ಕಿಟ್ ನಿಂದ ಅಗ್ನಿ ಅವಘಡವಾಗಿ ಸಂಪೂರ್ಣ ಬೆಂಕಿಗೆ ಆಹುತಿಯಾಗಿರುವ ಬಗ್ಗೆ ವರದಿಯಾಗಿದೆ.

IMG 20240610 WA0024 Accident News, Prime news, Tumakuru IMG 20240610 WA0025 Accident News, Prime news, Tumakuru IMG 20240610 WA0022 1 Accident News, Prime news, Tumakuru IMG 20240610 WA0023 Accident News, Prime news, Tumakuru IMG 20240610 WA0017 Accident News, Prime news, Tumakuru IMG 20240610 WA0018 Accident News, Prime news, Tumakuru IMG 20240610 WA0011 Accident News, Prime news, Tumakuru IMG 20240610 WA0012 Accident News, Prime news, Tumakuru

ರವಿವಾರ ರಾತ್ರಿ 10:30ಕ್ಕೆ ಸುಧಾಕರ ಶೆಟ್ಟಿ ಎಂಬವರ ಮಾಲಕತ್ವದ ಅಂಬಾ ಟಿವಿ ಸೆಂಟರ್ ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಇದರಿಂದ ಸೆಂಟರ್ನ ಒಳಗಿದ್ದ ಎಲ್ಲಾ ಸ್ವತ್ತುಗಳು ಸಂಪೂರ್ಣವಾಗಿ ಸುಟ್ಟು ಹೋಗಿದೆ. ಅದೇ ರೀತಿ ಮೂರು ಲಕ್ಷ ರೂ ನಗದು ಕೂಡ ಬೆಂಕಿಗೆ ಆಹುತಿಯಾಗಿದೆ ಒಟ್ಟಾರೆ ಈ ದುರಂತದಿಂದ ಒಂದು ಕೋಟಿಗೂ ಅಧಿಕ ರೂ. ನಷ್ಟ ಸಂಭವಿಸಿದೆ ಎನ್ನಲಾಗಿದೆ

ಘಟನಾ ಸ್ಥಳಕ್ಕೆ ಗಂಗೊಳ್ಳಿ ಪೊಲೀಸರು, ಅಗ್ನಿಶಾಮಕ ದಳದವರು, ಗಂಗೊಳ್ಳಿ ಮೆಸ್ಕಾಂ ಇಲಾಖೆ ಸಿಬ್ಬಂದಿಗಳು, ಬೆಂಕಿ ನಂದಿಸಲು ಹರಸಾಸಪಟ್ಟರು.

Latest Indian news

Popular Stories