ತೀರ್ಥಹಳ್ಳಿ:ಉಪವಾಸ ಮುಗಿಸಿ ತುಂಗಾ ನದಿಯಲ್ಲಿ ಈಜಲು ಹೋದ ಮೂವರು sslc ವಿದ್ಯಾರ್ಥಿಗಳು ನೀರುಪಾಲು

ತೀರ್ಥಹಳ್ಳಿ: ರಂಜಾನ್ ಉಪವಾಸ ಮುಗಿಸಿ ಮೂವರು ಎಸ್ಎಸ್ಎಲ್ ಸಿ ವಿದ್ಯಾರ್ಥಿಗಳು ತುಂಗಾ ನದಿಗೆ ಈಜಲು ಹೋಗಿ ನೀರು ಪಾಲಾದ ದಾರುಣ ಘಟನೆ ಸೋಮವಾರ ಸಂಜೆ ವೇಳೆ ನಡೆದಿದೆ.

ರಫನ್, ಇಯನ್, ಸಮ್ಮರ್ ಎಂಬ ಬಾಲಕರು ನೀರುಪಾಲಾದ ದುರ್ದೈವಿಗಳು. ತೀರ್ಥಹಳ್ಳಿ ರಾಮ ಮಂಟಪದ ಪಕ್ಕ ಈ ಘಟನೆ ನಡೆದಿದೆ. ಮೂವರು ಬಾಲಕರ ಶವ ಪತ್ತೆಯಾಗಿದೆ. ಸತತವಾಗಿ ಒಂದು ಘಂಟೆಯಿಂದ ತುಂಗಾ ನದಿಯ ತೀರದಲ್ಲಿ ಅಗ್ನಿ ಶಾಮಕ ದಳ ಮತ್ತು ಪೊಲೀಸರು ಹುಡುಕಾಟ ನಡೆಸಿ ಮೃತದೇಹ ಹೊರ ತೆಗೆದಿದ್ದಾರೆ.

IMG 20240401 WA0053 Accident News, Featured Story

ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಹುಡುಗರು ರಂಜಾನ್ ಉಪವಾಸ ಮುಗಿಸಿ ಸ್ನಾನಕ್ಕೆ ಈಜಲು ಹೋಗಿ ನಾಪತ್ತೆಯಾದ ಬಳಿಕ ಕುಟುಂಬಸ್ಥರು ಮತ್ತು ಸ್ಥಳೀಯರು ಹುಡುಕಾಟಕ್ಕಿಳಿದಿದ್ದರು.

Latest Indian news

Popular Stories