ಡಮಾಸ್ಕಸ್‌ ನ ಇರಾನಿನ ಕಾನ್ಸುಲೇಟ್‌ನ ಮೇಲೆ ಇಸ್ರೇಲ್’ನಿಂದ ಭಯೋತ್ಪಾದಕ ದಾಳಿ – ಕಮಾಂಡರ್ ಮೊಹಮ್ಮದ್ ರೆಜಾ ಸೇರಿ ಕನಿಷ್ಠ ಐದು ಮಂದಿ ಮೃತ್ಯು

ಇಸ್ರೇಲ್ ಡಮಾಸ್ಕಸ್‌ ನ ಇರಾನಿನ ಕಾನ್ಸುಲೇಟ್‌ನ ಮೇಲೆ ನಡೆಸಿದ ಭಯೋತ್ಪಾದಕ ದಾಳಿಯಿಂದಾಗಿ ಕಮಾಂಡರ್ ಮೊಹಮ್ಮದ್ ರೆಜಾ ಸೇರಿ ಐದು ಮಂದಿ ಹತರಾಗಿದ್ದಾರೆ.

ಇರಾನ್ ರಾಜ್ಯ ಮಾಧ್ಯಮ ಮತ್ತು ಸಿರಿಯನ್ ಅಧಿಕಾರಿಗಳ ಪ್ರಕಾರ, ಸಿರಿಯಾದ ಡಮಾಸ್ಕಸ್‌ನಲ್ಲಿರುವ ಇರಾನ್ ಕಾನ್ಸುಲೇಟ್ ಅನ್ನು ನೆಲಸಮಗೊಳಿಸಿದ ಇಸ್ರೇಲಿ ವೈಮಾನಿಕ ದಾಳಿಯಲ್ಲಿ ಹಲವಾರು ಮಂದಿ ಮೃತಪಟ್ಟಿದ್ದಾರೆ.

ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಯ ಗಣ್ಯ ಕುಡ್ಸ್ ಫೋರ್ಸ್‌ನ ಹಿರಿಯ ಕಮಾಂಡರ್ ಬ್ರಿಗೇಡಿಯರ್ ಜನರಲ್ ಮೊಹಮ್ಮದ್ ರೆಜಾ ಜಹೇದಿ ಸೇರಿ ದಾಳಿಯಲ್ಲಿ ಕನಿಷ್ಠ ಐದು ಮಂದಿ ಸಾವನ್ನಪ್ಪಿದ್ದಾರೆ ಎಂದು ಇರಾನ್ ಮಾಧ್ಯಮಗಳು ಸೋಮವಾರ ವರದಿ ಮಾಡಿವೆ.

ಸಿರಿಯಾದ ವಿದೇಶಾಂಗ ಸಚಿವ ಫೈಸಲ್ ಮೆಕ್ದಾದ್ “ಭಯೋತ್ಪಾದಕ ದಾಳಿ” ಯನ್ನು ಖಂಡಿಸಿದ್ದಾರೆ.


Latest Indian news

Popular Stories