ಭೀಕರ ರಸ್ತೆ ಅಪಘಾತ; ಸ್ಥಳದಲ್ಲೇ ASI ದುರ್ಮರಣ

ಬೆಳಗಾವಿ: ಭೀಕರ ರಸ್ತೆ ಅಪಘಾತದಲ್ಲಿ ಎಎಸ್‌ಐ ಓರ್ವರು ಮೃತಪಟ್ಟಿರುವ ಘಟನೆ ಬೆಳಗಾವಿ ಜಿಲ್ಲೆಯ ಯರಗಟ್ಟಿ ಪಟ್ಟಣದಲ್ಲಿ ನಡೆದಿದೆ.

ಮುರಗೋಡ ಠಾಣೆಯ ಎಎಸ್‌ಐ ವಿಜಯಕಾಂತ ಮಿಕಲಿ (48) ಮೃತ ದುರ್ದೈವಿ. ಮುರಗೋಡ ಠಾಣೆಯಿಂದ ಯರಗಟ್ಟಿ ಪಟ್ಟಣಕ್ಕೆ ತೆರಳುತ್ತಿದ್ದಾಗ ತಡರಾತ್ರಿ ಎದುರಿನಿಂದ ಬರುತ್ತಿದ್ದ ವಾಹನದ ಹೆಡ್ ಲೈಟ್ ನಿಂದ ರಸ್ತೆ ಕಾಣದೇ ಎ ಎಸ್ ಐ ತೆರಳುತ್ತಿದ್ದ ಬೈಕ್ ಡಿವೈಡರ್ ಗೆ ಡಿಕ್ಕಿ ಹೊಡೆದಿದೆ.

ಸ್ಥಳದಲ್ಲೇ ಎಎಸ್‌ಐ ಮೃತಪಟ್ಟಿದ್ದಾರೆ.ಯರಗಟ್ಟಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Latest Indian news

Popular Stories