ಮಂಗಳೂರು: ಸೆಂಟ್ರಲ್ ರೈಲ್ವೆ ನಿಲ್ದಾಣದ ಪಾರ್ಕಿಂಗ್ ಸ್ಥಳದಲ್ಲಿ ಪ್ರಯಾಣಿಕರು- ರಿಕ್ಷಾ ಚಾಲಕರ ಮಾರಾಮಾರಿ

ಮಂಗಳೂರು: ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದ ಪಾರ್ಕಿಂಗ್ ಸ್ಥಳದಲ್ಲಿ ರಿಕ್ಷಾ ಚಾಲಕರು ಮತ್ತು ಪ್ರಯಾಣಿಕರ ನಡುವೆ ಮಾರಾಮಾರಿ ನಡೆದ ಘಟನೆಯ ವೀಡಿಯೋ ಹರಿದಡತೊಡಗಿದೆ
ಮಂಗಳವಾರ ಬೆಳಗ್ಗೆ ಈ ಘಟನೆ ನಡೆದಿದ್ದು ನಗರ ಪೊಲಿಸ್ ಕಮಿಷನರ್ ಪ್ರಕರಣದ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.

ಘಟನೆಯ ವಿವರ: ಚೆನ್ನೈನಿಂದ ಆಗಮಿಸಿರುವ ದಂಪತಿಯನ್ನು ಕರೆದೊಯ್ಯಲು ರೈಲ್ವೆ ನಿಲ್ದಾಣಕ್ಕೆ ಸ್ಥಳೀಯರಿಬ್ಬರು ಬೈಕ್ ನಲ್ಲಿ ಬಂದಿದ್ದರು. ಆದರೆ ರೈಲ್ವೇ ನಿಲ್ದಾಣದಲ್ಲಿ ನಿಯಮದ ಪ್ರಕಾರ, ನಿಗದಿತ ಸ್ಥಳಗಳಲ್ಲಿ ಮಾತ್ರ ಪಾರ್ಕಿಂಗ್ ಮಾಡಬೇಕು. ಮುಖ್ಯಗೇಟ್‌ ಬಳಿ ಪ್ರಯಾಣಿಕರನ್ನು ಇಳಿಸಲು ಮತ್ತು ಹತ್ತಿಸಲು ಮಾತ್ರ ಅನುಮತಿ ಇತ್ತು. ಈ ವಿಚಾರಕ್ಕೆ ಸಂಬಂಧಿಸಿದಂತೆ ಪಾರ್ಕಿಂಗ್ ನೋಡಿಕೊಳ್ಳುವ ಚಂದನ್ ಎಂಬಾತ ಹಾಗೂ ದಂಪತಿಯನ್ನು ಕರೆದೊಯ್ಯಲು ಬಂದಿರುವ ಇಬ್ಬರು ನಡುವೆ ಆರಂಭದಲ್ಲಿ ವಾಗ್ವಾದ ನಡೆದಿದೆ. ಈ ವೇಳೆ ಚಂದನ್ ಬೆಂಬಲವಾಗಿ, ಒಂದಿಬ್ಬರು ಆಟೋರಿಕ್ಷಾ ಚಾಲಕರು ಮಧ್ಯಪ್ರವೇಶಿಸಿದ್ದಾರೆ. ಇದರಿಂದ ವಾಗ್ವಾದ ಮತ್ತಷ್ಟು ಬೆಳೆದು ಹೊಯ್ ಕೈ ಆಗುವಲ್ಲಿಗೆ ಹೋಗಿದೆ. ಈ ವೇಳೆ ಮಹಿಳೆಯ ಬೊಬ್ಬೆ ಹಾಕುವುದು ವೀಡಿಯೊದಲ್ಲಿ ದಾಖಲಾಗಿದೆ.

ಈ ಬಗ್ಗೆ ಆಟೋ ಚಾಲಕರ ಗುರುತು ಪತ್ತೆ ಹಚ್ಚಲಾಗಿದ್ದು, ಶೀಘ್ರ ಕ್ರಮ ಕೊಳ್ಳಲಾಗುವುದು ಎಂದು ಮಂಗಳೂರು ಪೊಲೀಸ್ ಕಮಿಷನರ್ ತಿಳಿಸಿದ್ದಾರೆ.

Video Link:

https://www.facebook.com/share/v/nBYgwLD2BHBsRQjb/?mibextid=WaXdOe

Latest Indian news

Popular Stories