ಕಾರ್ಕಳ: ಸುಡುಮದ್ದು ತಯಾರಿಕಾ ಘಟಕ ಸಿಡಿದು ಇಬ್ಬರಿಗೆ ಗಾಯ

ಕಾರ್ಕಳ: ಸುಡುಮದ್ದು ತಯಾರಿಕಾ ಘಟಕ ಸಿಡಿದು ಇಬ್ಬರು ಮಹಿಳೆಯರಿಗೆ ಗಾಯಗಳಾದ ಘಟನೆ ಕಾರ್ಕಳ ತಾಲೂಕಿನ ಕಾರ್ಕಳ ಕಸಬಾ ಗ್ರಾಮದ ಹಿಮ್ಮುಂಜೆ ಬಳಿಯ ಕಜೆ ಎಂಬಲ್ಲಿ ಬುಧವಾರ ನಡೆದಿದೆ.

ಕಾರ್ಕಳ ಕಸಬಾ ಗ್ರಾಮದ ಹಿಮ್ಮುಂಜೆ ಬಳಿಯ ಕಜೆ ಎಂಬಲ್ಲಿ ಕೆಲವಾರು ವರ್ಷಗಳಿಂದ ಸುಡುಮದ್ದು ತಯಾರಿಕಾ ಘಟಕ ಕಾರ್ಯಾಚರಿಸುತ್ತಿದ್ದು ಎಂದಿನಂತೆ ಇಂದು ಬೆಳಗ್ಗೆ ಸುಡುಮದ್ದು ತಯಾರಿಕೆ ಸಂದರ್ಭದಲ್ಲಿ ಅನೀರಿಕ್ಷಿತ ಸ್ಪೋಟ ಸಂಭವಿಸಿದೆ.

ಸುಡುಮದ್ದು ತಯಾರಿಕಾ ಘಟಕದಲ್ಲಿ 3 ಬೇರೆ ಬೇರೆ ಕಟ್ಟಡಗಳಿದ್ದು ಒಂದು ಕಟ್ಟಡ ಸ್ಫೋಟಕ್ಕೆ ತುತ್ತಾಗಿದೆ. ಸ್ಫೋಟದ ಸಂದರ್ಭ ಒಳಗೆ ಕೆಲಸ ನಿರ್ವಹಿಸುತ್ತಿರುವ ಮಹಿಳೆಯರು ಗಾಯಗೊಂಡಿದ್ದರೆ ಕಟ್ಟಡಕ್ಕೆ ಹಾನಿಯಾಗಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

Latest Indian news

Popular Stories