ವಲ್ಸಾದ್ ಜಿಲ್ಲೆಯ ಪಾರ್ಡಿ ಗ್ರಾಮದ ಬಳಿ ಮುಂಬೈ-ಅಹಮದಾಬಾದ್ ಹೆದ್ದಾರಿಯಲ್ಲಿ ಶುಕ್ರವಾರ ಮುಂಜಾನೆ 16 ಪ್ರಯಾಣಿಕರನ್ನು ಹೊತ್ತುಕೊಂಡು ಸಾಗುತ್ತಿದ್ದ ಬಸ್ ನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡ ಪರಿಣಾಮ ಕೆಳಕಾಲ ಆತಂಕ ಸೃಷ್ಟಿಯಾಗಿದೆ.ಈ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಅಥವಾ ಗಾಯಗಳ ಬಗ್ಗೆ ವರದಿಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಘಟನೆ ನಡೆದಾಗ ಬಸ್ ಅಹ್ಮದಬಾದ್‌ನಿಂದ ಬೆಳಗಾವಿಗೆ (ಕರ್ನಾಟಕ) ತೆರಳುತ್ತಿತ್ತು.ಈ ಘಟನೆಯಿಂದಾಗಿ ಅಗ್ನಿಶಾಮಕ ದಳದವರು ಬೆಂಕಿಯನ್ನು ನಂದಿಸುವ ಪ್ರಯತ್ನಗಳನ್ನು ಮಾಡಿದ್ದರಿಂದ ಮುಂಬೈ-ಅಹಮದಾಬಾದ್ ಹೆದ್ದಾರಿಯನ್ನು ಸುಮಾರು 2 ಗಂಟೆಗಳ ಕಾಲ ಮುಚ್ಚಬೇಕಾಯಿತು ಎನ್ನಲಾಗಿದೆ.