ವಂಟಮೂರಿ ಗ್ರಾಮದ ‘ಸಂತ್ರಸ್ತ ಮಹಿಳೆ’ಗೆ ರಾಜ್ಯ ಸರ್ಕಾರದಿಂದ ‘2 ಎಕರೆ ಜಮೀನು’ ಮಂಜೂರು

ಬೆಳಗಾವಿ: ರಾಜ್ಯ ಸರ್ಕಾರದಿಂದ ಈಗಾಗಲೇ ಬೆಳಗಾವಿಯ ವಂಟಮೂರಿ ಗ್ರಾಮದಲ್ಲಿ ಮಹಿಳೆಯ ವಿವಸ್ತ್ರಗೊಳಿಸಿ ಹಲ್ಲೆ ಪ್ರಕರಣದ ಸಂತ್ರಸ್ತೆಗೆ 5 ಲಕ್ಷ ಪರಿಹಾರವನ್ನು ಘೋಷಣೆ ಮಾಡಲಾಗಿತ್ತು. ಈ ಬೆನ್ನಲ್ಲೇ ಸಂತ್ರಸ್ತ ಮಹಿಳೆಗೆ 2.3 ಎಕರೆ ಜಮೀನು ಮಂಜೂರು ಮಾಡಲಾಗಿದೆ.

ಈ ಕುರಿತಂತೆ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಮಾಹಿತಿ ನೀಡಿದ್ದು, ವಂಟಮೂರಿ ಗ್ರಾಮದಲ್ಲಿ ವಿವಸ್ತ್ರಗೊಳಿಸಿ, ಹಲ್ಲೆ ಮಾಡಲಾಗಿರುವಂತ ಸಂತ್ರಸ್ತ ಮಹಿಳೆಗೆ ರಾಜ್ಯ ಸರ್ಕಾರದಿಂದ 2.3 ಎಕರೆ ಜಮೀನು ಮಂಜೂರು ಮಾಡಲಾಗುತ್ತಿದೆ ಎಂದರು.

ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಿಂದ 2.3 ಎಕರೆ ಜಮೀನು ಮಂಜೂರು ಮಾಡಲಾಗುತ್ತಿದೆ. ಸಚಿವ ಬಿ.ನಾಗೇಂದ್ರ ಈಗಾಗಲೇ ನಿಗಮಕ್ಕೆ ನಿರ್ದೇಶನ ನೀಡಿದ್ದಾರೆ. ಮಹಿಳೆಗೆ ಆರ್ಥಿಕ ಸ್ಥಿರತೆ ಒದಗಿಸೋ ದೃಷ್ಠಿಯಿಂದ 2.3 ಎಕರೆ ಜಮೀನು ಮಂಜೂರು ಮಾಡಲಾಗುತ್ತಿದೆ ಎಂಬುದಾಗಿ ಹೇಳಿದರು.

ನಿನ್ನೆಯಷ್ಟೇ ರಾಜ್ಯ ಸರ್ಕಾರದಿಂದ ಸಂತ್ರಸ್ತೆಗೆ 5 ಲಕ್ಷ ಪರಿಹಾರ ನೀಡುವುದಾಗಿ ಘೋಷಣೆ ಮಾಡಲಾಗಿದೆ. ಇಂದು ಸಂತ್ರಸ್ಥೆಯನ್ನು ಆರ್ಥಿಕವಾಗಿ ಸಭಲಗೊಳಿಸೋ ನಿಟ್ಟಿನಲ್ಲಿ 2.3 ಎಕರೆ ಜಮೀನು ನೀಡೋದಕ್ಕೆ ನಿರ್ಧರಿಸಲಾಗಿದೆ ಎಂದರು.

Latest Indian news

Popular Stories