ಬೆಳಗಾವಿ: ಗೋಡೆ ಕುಸಿದು ವ್ಯಕ್ತಿ ಸಾವು

ಬೆಳಗಾವಿ: ಆಕಸ್ಮಿಕವಾಗಿ ಗೋಡೆ ಕುಸಿದು ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟ ಘಟನೆ ತಾಲ್ಲೂಕಿನ ಬಡಾಲ ಅಂಕಲಗಿ ಗ್ರಾಮದಲ್ಲಿ ಮಂಗಳವಾರ ನಡೆದಿದೆ.

ಇದೇ ಗ್ರಾಮದ ಚನ್ನಪ್ಪ ಕುರಬರ (45) ಮೃತಪಟ್ಟವರು. ಮಂಗಳವಾರ ನಸುಕಿನಲ್ಲಿ ಮಲಗಿದ್ದಾಗ ಘಟನೆ ನಡೆದಿದೆ.
ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ತಹಶೀಲ್ದಾರ ಬಸವರಾಜ ನಾಗರಾಳ, ಹಿರೇಬಾಗೇವಾಡಿ ಸಿಪಿಐ ಮತ್ತಿತರ ಅಧಿಕಾರಿಗಳು ಸ್ಥಳಕ್ಕೆ ಭೇಟಿ‌ ನೀಡಿದರು.

Latest Indian news

Popular Stories