ಇಂದು ಬೆಳಗಾವಿಯಲ್ಲಿ ರಾಜ್ಯ ಸರ್ಕಾರದ ವಿರುದ್ದ ಬೃಹತ್‌ ಧರಣಿಗೆ ಮುಂದಾದ ಬಿಜೆಪಿ

ಬೆಳಗಾವಿ: ಇಂದು ರಾಜ್ಯ ಸರ್ಕಾರದ ವಿರುದ್ದ ಬೃಹತ್‌ ಧರಣಿಗೆ ಬಿಜೆಪಿ ಮುಂದಾಗಿದೆ. ಈ ಬಗ್ಗೆ ಇಂದು ನಗರದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಮಾಜಿ ಸಿಎಂ ಬಿ.ಎಸ್‌ ಯಡಿಯ್ಯೂರಪ್ಪನವರು ಸರಿ ಸುಮಾರು 20 ಸಾವಿರಕ್ಕೂ ಹೆಚ್ಚು ಮಂದಿ ಆಗಮಿಸಿಲಿದ್ದಾರೆ ಅಂತ ತಿಳಿಸಿದರು.

ಇವರ ಬಳಿ ಗ್ಯಾರಂಟಿಗಳಿಗೂ ಹಣವಿಲ್ಲ. ರಾಜ್ಯದ ಜನತೆಗೆ ಈ ಸರ್ಕಾರ ಬೇಡವಾಗಿದೆ ಅಂಥ ಹೇಳಿದರು. ಇನ್ನೂ ಕಾಂಗ್ರೆಸ್‌ ಸರ್ಕಾರವನ್ನು ಎಚ್ಚೆತ್ತುಮಾಡುವ ಸಲುವಾಗಿ ಈ ಪ್ರತಿಭಟನೆ ನಡೆಸಲಾಗುವುದು ಅಂಥ ತಿಳಿಸಿದರು.ಇನ್ನೂ ಈ ನಡುವೆ ಇದಕ್ಕೆ ಸಂಬಂಧಪಟ್ಟಂಥೆ ಮಾತನಾಡಿರುವ ಡಿ.ಸಿಎಂ ಡಿ.ಕೆ ಶಿವಕುಮಾರ್ ಸದನದ ಬಳಗೆ ಬಂದು ಚರ್ಚೆ ಮಾಡುವುದು ಬಿಟ್ಟು, ಹೀಗೆ ಹೊರಗೆ ಬಂದು ಗಲಾಟೆ ಮಾಡಿದ್ರೆ ಹೇಗೆ ಅಂತ ಪ್ರಶ್ನೆ ಮಾಡಿದರು. ಇನ್ನೂ ವಿಪಗಳಲ್ಲಿ ಒಗ್ಗಟ್ಟು ಇಲ್ಲ ಅಂತ ಹೇಳಿದರು.

Latest Indian news

Popular Stories