ಉತ್ತರ ಕರ್ನಾಟಕ’ದ ಸಮಸ್ಯೆಗಳ ಚರ್ಚೆಗೆ ನಮ್ಮ ಸಂಪೂರ್ಣ ಸಹಕಾರ ಇದೆ- ಡಿಸಿಎಂ ಡಿ.ಕೆ.ಶಿವಕುಮಾರ್

ಬೆಳಗಾವಿ : ಬರದ ಹಿನ್ನೆಲೆಯಲ್ಲಿ ಉತ್ತರ ಕರ್ನಾಟಕದ ಹಲವು‌ ಸಮಸ್ಯೆಗಳ ಬಗ್ಗೆ ವಿಧಾನಸಭೆಯಲ್ಲಿ ಚರ್ಚೆ ಮಾಡಲು ನಾವು ಸಂಪೂರ್ಣ ಬೆಂಬಲ ನೀಡುತ್ತೇವೆ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ತಿಳಿಸಿದರು.

ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಇಂದಿ‌ನ ಅಧಿವೇಶನದಲ್ಲಿ‌ ಉತ್ತರ ಕರ್ನಾಟಕದ ಸಮಸ್ಯೆಗಳ‌ ಬಗ್ಗೆ‌ ಚರ್ಚೆ ನಡೆಯಲಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದಂತ ಅವರು, ವಿರೋಧ ಪಕ್ಷದ ಶಾಸಕರಾಗಲಿ, ಆಡಳಿತ ಪಕ್ಷದ ಶಾಸಕರಾಗಲಿ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಿದರೆ ಸ್ಪಂದಿಸಲು‌ ಸರ್ಕಾರ ಸಿದ್ಧವಾಗಿದೆ‌.

ಉತ್ತರ ಕರ್ನಾಟಕ, ಮಧ್ಯ ಕರ್ನಾಟಕ, ಕಿತ್ತೂರು‌ ಕರ್ನಾಟಕ, ಹಳೇ ಮೈಸೂರು ಕರ್ನಾಟಕ ಸೇರಿದಂತೆ ನಮ್ಮದು ಸಮಗ್ರ ಕರ್ನಾಟಕ. ವಿಧಾನಸಭೆಯಲ್ಲಿ ಚರ್ಚೆ ನಡೆಸಲು ನಾವು ಸದಾ ಸಹಕಾರ ನೀಡುತ್ತೇವೆ” ಎಂದು ಹೇಳಿದರು.

Latest Indian news

Popular Stories