ಹೆಣ್ಣು ಭ್ರೂಣ ಹತ್ಯೆ ತಡೆಗೆ ಕಠಿಣ ಕಾನೂನು ಜಾರಿಗೆ ತನ್ನಿ: ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ

ಹೆಣ್ಣು ಭ್ರೂಣ ಲಿಂಗ ಹತ್ಯೆ ಮಹಾಪಾಪದಲ್ಲಿ ಭಾಗಿಯಾಗುವ ಪೋಷಕರು, ವೈದ್ಯರು ಎಂಬುದರ ಬಗ್ಗೆ ಸೂಕ್ಷ್ಮವಾಗಿ ಮಾಹಿತಿ ಕಲೆ ಹಾಕಿ ತಪ್ಪಿಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಂಡು ಶಿಕ್ಷೆ ವಿಧಿಸಬೇಕು ಎಂದು ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಹೇಳಿದರು.

ಬೆಳಗಾವಿ ಸುವರ್ಣಸೌಧದಲ್ಲಿ ನಡೆಯುತ್ತಿರುವ ಚಳಿಗಾಲ ಅಧಿವೇಶನದಲ್ಲಿ ಹೆಣ್ಣು ಭ್ರೂಣ ಹತ್ಯೆ ತಡೆಗೆ ಕಠಿಣ ಕ್ರಮ ಜರುಗಿಸುವ ನಿಟ್ಟಿನಲ್ಲಿ ನಡೆದ ಚರ್ಚೆಯಲ್ಲಿ ಮಾತನಾಡಿದ ಅವರು ಸಭಾಧ್ಯಕ್ಷರ ಮೂಲಕ ಆರೋಗ್ಯ ಸಚಿವರಿಗೆ ಸಲಹೆ ನೀಡಿದರು. “ಭಾರತದಲ್ಲಿ ಸ್ತ್ರೀಯರಿಗೆ ಪೂಜ್ಯನೀಯ ಸ್ಥಾನವಿದೆ, ಹೀಗಾಗಿ ನಾವೆಲ್ಲರೂ ʼಭಾರತ ಮಾತಾಕೀ ಜೈʼ ಎಂದು ಘೋಷಣೆ ಕೂಗುತ್ತೇವೆ.

ಇಂದು ಸಮಾಜದಲ್ಲಿ ಹೆಣ್ಣು ಹುಟ್ಟುವ ಮೊದಲೇ ಹತ್ಯೆ ಮಾಡುವ ಕೆಲಸ ಅವ್ಯವಹಾರ ನಡೆಯುತ್ತಿರುವುದು ನಿಜಕ್ಕೂ ಆತಂಕಕಾರಿ ಬೆಳವಣಿಗೆ. ನಮ್ಮ ದೇಶದಲ್ಲಿ ಕಠಿಣ ಕಾನೂನಿಗೆ ಜನರು ಹೆದರುತ್ತಾರೆ. ಹೀಗಾಗಿ ಭ್ರೂಣ ಹತ್ಯೆ ವಿರುದ್ಧ ಗ್ರಾಮ ಪಂಚಾಯತ್‌ ಮಟ್ಟದಲ್ಲಿ ಕಠಿಣ ಕಾನೂನು ಜಾರಿಗೊಳಿಸಬೇಕು” ಎಂದು ಒತ್ತಾಯಿಸಿದರು. ಈ ಸುದ್ದಿ ಓದಿದ್ದೀರಾ? ಪೂರ್ವಾಪರ ವಿಚಾರಿಸದೇ ಪಾಸ್ ನೀಡಿದ್ದಕ್ಕೆ ಕೋಪ; ಪ್ರತಾಪ್ ಸಿಂಹಗೆ ಎಂಪಿ ಟಿಕೆಟ್ ಕೊಡಲ್ವಂತೆ, ಪಾಪ! ಹೆಣ್ಣು ಭ್ರೂಣ ಹತ್ಯೆ ಸಂಪೂರ್ಣ ತಡೆಯಲು ಪ್ರತಿ ಗ್ರಾಮ ಪಂಚಾಯತ್‌ ಮಟ್ಟದಲ್ಲಿ ಆಶಾ ಕಾರ್ಯಕರ್ತೆ, ವೈದ್ಯ ಸಿಬ್ಬಂದಿ, ವೈದ್ಯರು ಹಾಗೂ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್‌ವರೆಗೂ ಭ್ರೂಣ ಹತ್ಯೆ ವಿರುದ್ಧದ ಕಾನೂನಿನ ಭಯ ಇರಬೇಕು.

ಮತ್ತು ಗ್ರಾಮೀಣ ಭಾಗದ ಜನರಿಗೆ ಹೆಣ್ಣು ಭ್ರೂಣ ಲಿಂಗ ಹತ್ಯೆ ನಿಷೇಧ ಕಾಯ್ದೆ ಕುರಿತು ಅರಿವು ಮೂಡಿಸಿ ಲಿಂಗ ಅಸಮಾನತೆ ನಿವಾರಣೆ ಮಾಡಲು ಸಾಧ್ಯ. ಹೆಣ್ಣು ಭ್ರೂಣ ಹತ್ಯೆ ದುಷ್ಕೃತ್ಯದಲ್ಲಿ ತೊಡಗಿದವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಿ ಶಿಕ್ಷೆಗೆ ಒಳಪಡಿಸಬೇಕು” ಎಂದು ಆಗ್ರಹಿಸಿದರು.

Latest Indian news

Popular Stories