ಮುಂದಿನ ವರ್ಷ 8ನೇ ತರಗತಿಗೆ ಉಚಿತ ಸೈಕಲ್‌ ವಿತರಣೆ : ಸಚಿವ ಮಧು ಬಂಗಾರಪ್ಪ

ಬೆಳಗಾವಿ: ಪ್ರೌಢಶಾಲೆಗೆ ಹೋಗುವ ಹೆಣ್ಣು ಮಕ್ಕಳಿಗೆ ಬಿ.ಎಸ್.‌ ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗ ನೀಡಿದ್ದ ಉಚಿತ ಸೈಕಲ್‌ ಯೋಜನೆಗೆ ಮರು ಚಾಲನೆ ಸಿಗಲಿದೆ ಎಂದು ಮಧು ಬಂಗಾರಪ್ಪ ಬರವಸೆ ನೀಡಿದ್ದಾರೆ.

ಸರ್ಕಾರಿ ಶಾಲೆಗಳ ಎಂಟನೇ ತರಗತಿ ಮಕ್ಕಳಿಗೆ ಮತ್ತೆ ಸೈಕಲ್ ವಿತರಣೆ ಮಾಡಬೇಕು ಎಂದು ಶಾಸಕ ಪ್ರದೀಪ್‌ ಈಶ್ವರ್‌ ಅವರು ಪ್ರಶ್ನೋತ್ತರ ವೇಳೆ ಒತ್ತಾಯ ಮಾಡಿದಾಗ, ಪ್ರತಿಕ್ರಿಯೆ ನೀಡಿದ ಸಚಿವ ಮಧು ಬಂಗಾರಪ್ಪ, ಮುಂದಿನ ಬಜೆಟ್‌ನಲ್ಲಿ ಸೈಕಲ್ ವಿತರಣೆಗೆ ಕ್ರಮ ಕೈಗೊಳ್ಳಲಾಗುವುದು. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಹಾಗೂ ಆರ್ಥಿಕ ಇಲಾಖೆ ಜತೆ ಚರ್ಚಿಸಿ ಕ್ರಮ ವಹಿಸುವುದಾಗಿ ಹೇಳಿದ್ದಾರೆ.

ಈ ವೇಳೆ ಪ್ರದೀಪ್ ಈಶ್ವರ್ ಮಾತನಾಡಿ, ಇದರೊಟ್ಟಿಗೆ ಎರಡು ಜತೆ ಶೂ, ಸಾಕ್ಸ್ ಬದಲು ನಾಲ್ಕು ಜತೆ ವಿತರಣೆ ಮಾಡಿದೆ ಮಕ್ಕಳಿಗೆ ಅನುಕೂಲವಾಗುತ್ತದೆ ಎಂದು ಒತ್ತಾಯಿಸಿದರು.ಇದಕ್ಕೆ ಉತ್ತರಿಸಿದ ಸಚಿವ ಮಧು ಬಂಗಾರಪ್ಪ, ಸೈಕಲ್ ವಿತರಣೆ ಬಿಜೆಪಿ ಕಾಲದಲ್ಲೇ ಸ್ಥಗಿತ ಆಗಿದೆ. ನಿಮ್ಮವರೇ ಆರಂಭಿಸಿ ನಿಮ್ಮ ಕಾಲದಲ್ಲೇ ಸ್ಥಗಿತ ಆಯಿತು, ಹೀಗಾಗಬಾರದಿತ್ತು. ಈಗ ನಮ್ಮ ಸರ್ಕಾರ ಸೈಕಲ್ ವಿತರಣೆಗೆ ಪರಿಶೀಲಿಸಿ ಕ್ರಮ ವಹಿಸಲಿದೆ ಎಂದು ಟಾಂಗ್‌ ಕೊಟ್ಟರು.

Latest Indian news

Popular Stories