ಡಿಎಮ್‍ಎಫ್ ನಿಧಿಯಿಂದ ಅಟಲ್ ಬಿಹಾರಿ ವಾಜಪೇಯಿ ಜೂಲಾಜಿಕಲ್ ಪಾರ್ಕ್‍ಗೆ ವಾಹನಗಳ

ಹೊಸಪೇಟೆ (ವಿಜಯನಗರ) ಏ.15(ಕರ್ನಾಟಕ ವಾರ್ತೆ): ಜಿಲ್ಲಾ ಖನಿಜ ಪ್ರತಿಷ್ಟಾನ ನಿಧಿ(ಡಿಎಮ್‍ಎಫ್)ಯಿಂದ ಹೊಸಪೇಟೆ ತಾಲ್ಲೂಕಿನ ಕಮಲಾಪುರದಲ್ಲಿನ ಅಟಲ್ ಬಿಹಾರಿ ವಾಜಪೇಯಿ ಜೂಲಾಜಿಕಲ್ ಪಾರ್ಕ್‍ಗೆ ನೀಡಿದ್ದ ವಾಹನಗಳಿಗೆ ಮೂಲಭೂತ ಸೌಕರ್ಯ ಅಬಿವೃದ್ಧಿ, ಹಜ್ ಮತ್ತು ವಕ್ಫ್ ಖಾತೆ ಸಚಿವರು ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಾದ ಆನಂದ್ ಸಿಂಗ್ ಅವರು ಗುರುವಾರ ಚಾಲನೆ ನೀಡಿದರು.

ಜಿಲ್ಲಾ ಖನಿಜ ಪ್ರತಿಷ್ಟಾನ ನಿಧಿ(ಡಿಎಮ್‍ಎಫ್)ಯಿಂದ ಒಟ್ಟು 11ಕೋಟಿ ರೂ. ಬಿಡುಗಡೆಯಾಗಿದ್ದು ಅದರಲ್ಲಿ 5ಕೋಟಿ ರೂ. ಪ್ರವೇಶ ಮುಖ್ಯದ್ವಾರ, 5ಕೋಟಿ ರೂ. ಜೂಲಾಜಿಕಲ್ ಪಾರ್ಕ್‍ನ ರಸ್ತೆಯ ಡಾಂಬರೀಕರಣಕ್ಕಾಗಿ, 1ಕೋಟಿ ವೆಚ್ಚದಲ್ಲಿ ಮೃಗಾಲಯಕ್ಕೆ 2 ಬಸ್ಸು, 1ಜೀಪ್, ಮೃಗಾಲಯ ಆಸ್ವತ್ರೆಗೆ ಅವಶ್ಯಕತೆಯಿರುವ ಸ್ಕ್ಯಾನಿಂಗ್ ಮಿಷಿನ್ ಮತ್ತು ಎಕ್ಸ್ರಾ ಮಿಷಿನ್ ಹಾಗೂ ಇನ್ನು ಮುಂತಾದ ಸೌಲಭ್ಯಗಳಿಗೆ ಹಣ ಬಿಡುಗಡೆ ಮಾಡಲಾಗಿದೆ.
ಈ ಸಂದರ್ಭದಲ್ಲಿ ಉಪವಿಭಾಗ ಸಂರಕ್ಷರಣ ಅಧಿಕಾರಿ ಟಿ. ಸಿದ್ದರಾಮಪ್ಪ (ಬಳ್ಳಾರಿ ಪ್ರದೇಶಿಕಾ ಅಭಿವೃದ್ದಿ ಅಧಿಕಾರಿ) ಕಿರಣ್, ಪಟ್ಟಣ ಪಂಚಾಯಿತಿಯ ಅಧ್ಯಕ್ಷರರಾದ ಅಮಮುಲ್ಲಾ ಖಾನ್, ವಲಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಹಾಗೂ ಇತರರು ಇದ್ದರು.

Latest Indian news

Popular Stories