ಉ.ಕ | ವ್ಯಕ್ತಿಯ ಮೇಲೆ ಚಿರತೆ ದಾಳಿ : 24 ತಾಸುಗಳ ನಂತರ ಚಿರತೆ ಸೆರೆ

ಕಾರವಾರ : ಕುಮಟಾ ತಾಲೂಕಿನ ಬಾಡ ಗ್ರಾಮದಲ್ಲಿ ವ್ಯಕ್ತಿಯ ಮೇಲೆ ಚಿರತೆ ದಾಳಿ ಮಾಡಿ, ಮನೆಯೊಂದರಲ್ಲಿ ಅಡಗಿದ್ದ ಚಿರತೆಯನ್ನು ಶನಿವಾರ ಸೆರೆ ಹಿಡಿಯಲಾಗಿದೆ‌.

IMG 20240427 WA0037 Uttara Kannada

ಶುಕ್ರವಾರ ಸಂಜೆ ಬಾಡ ಗ್ರಾಮದಲ್ಲಿ ಮಹಾಬಲೇಶ್ವರ ನಾಯ್ಕ ಎಂಬುವವರ ಮೇಲೆ ದಾಳಿ ಮಾಡಿದ ಚಿರತೆ, ಮನೆಯೊಂದರಲ್ಲಿ ಅಡಗಿತ್ತು. ಅರಣ್ಯಾಧಿಕಾರಿಗಳು ಮನೆಯಲ್ಲಿ ಅಡಗಿದ್ದ ಚಿರತೆ ಹಿಡಿಯುವ ಪ್ರಯತ್ನ ವಿಫಲವಾಗಿ ಅರವಳಿಕೆ ತಜ್ಞರನ್ನು ಕರೆಯಿಸಲು ಚಿಂತನೆ ನಡೆಸಿದರು.

ಶಿವಮೊಗ್ಗ ದಿಂದ ಅರವಳಿಕೆ ತಜ್ಞರ ತಂಡ ಬರಲು 24 ತಾಸು ಗಳು ಬೇಕಾಯಿತು‌ . ಈ ವಿಳಂಬಕ್ಕೆ ಸ್ಥಳೀಯರು
ಪ್ರತಿಭಟನೆ ಸಹ ಮಾಡಿದರು‌ . ಶನಿವಾರ ಸಂಜೆ ಅರವಳಿಕೆ ತಜ್ಞರ ತಂಡ ಆಗಮಿಸಿತು. ಡಾ.ಅಭಿಲಾಷ ಅವರು ಗನ್ ನಿಂದ ಚಿರತೆಗೆ ಅರವಳಿಕೆ ಚುಚ್ಚುಮದ್ದು ನೀಡಿದರು‌ .ಪ್ರಜ್ಞೆ ತಪ್ಪಿದ ಚಿರತೆಯನ್ನು ಹತ್ತು ನಿಮಿಷದಲ್ಲಿ ಸೆರೆ ಹಿಡಿದು ಬೋನಿಗೆ ಹಾಕಲಾಯಿತು.
ನಂತರ ಅದರ ಆರೋಗ್ಯ ಪರಿಶೀಲಿಸಿ , ಕಾಡಿಗೆ ಬಿಡಲಾಗುವುದು ಎಂದು ಕೆನರಾ‌ವೃತ್ತದ ಸಿಸಿಎಫ್ ವಸಂತ‌ ರೆಡ್ಡಿ ತಿಳಿಸಿದ್ದಾರೆ. ಚಿರತೆ ಹಿಡಿಯುವ ಕಾರ್ಯಚರಣೆಗೆ 24 ತಾಸು ಕಾಯಬೇಕಾದ ಸನ್ನಿವೇಶ ನಿರ್ಮಾಣದ ನಂತರ ಗ್ರಾಮದ ‌ಜನತೆ ನಿಟ್ಟುಸಿರು ಬಿಟ್ಟಿದ್ದಾರೆ.
…..

Latest Indian news

Popular Stories