ಬಳ್ಳಾರಿ ಎ.ಪಿ.ಎಂ.ಸಿ ಅಧ್ಯಕ್ಷ ಮತ್ತು ಪದಾಧಿಕಾರಿಗಳಿಗೆ ಅಭಿನಂದನೆ

ಬಳ್ಳಾರಿ.ಜು.೨೬: ಬಳ್ಳಾರಿ ಕೃಷಿ ಉತ್ಪನ್ನ ಮಾರುಕಟ್ಟೆಯ ಅಧ್ಯಕ್ಷರನ್ನಾಗಿ ಉಮೇಶ್ ಕುಮಾರ್ ಇವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಮತ್ತು ಮುಂದಿನ ಆದೇಶದವರೆಗೆ ಕರ್ನಾಟಕ ಸರ್ಕಾರ ನಾಮನಿರ್ದೇಶನಗೊಳಿಸಿ ಆದೇಶಿಸಿದೆ.
ಈ ಸಂದರ್ಭದಲ್ಲಿ ಬಳ್ಳಾರಿಯ ಭಾರತೀಯ ಜನತಾ ಪಕ್ಷದ ಮುಖಂಡರು, ಎ.ಪಿ.ಎಂ.ಸಿ ವರ್ತಕರು ಮತ್ತು ಅವರ ಸ್ನೇಹ ಬಳಗದವತಿಯಿಂದ ಸನ್ಮಾನಿಸಿ ಅಭಿನಂದಿಸಲಾಯಿತು.
ಗೌರವ ಸನ್ಮಾನ ಸ್ವೀಕರಿಸಿ ಮಾತನಾಡಿದ ಅಧ್ಯಕ್ಷ ಉಮೇಶ್‌ಕುಮಾರ್‌ರವರು, ಪಕ್ಷಕ್ಕೆ ನನ್ನ ಸೇವೆಯನ್ನು ಗುರುತಿಸಿ ನನಗೆ ಈ ಜವಬ್ಧಾರಿಯನ್ನು ನೀಡಿದ ಜಿಲ್ಲಾಧ್ಯಕ್ಷರಾದ ಚನ್ನಬಸವನಗೌಡ, ಸಚಿವರಾದ ಬಿ ಶ್ರೀ ರಾಮುಲು, ಶಾಸಕರಾದ ಗಾಲಿ ಸೋಮಶೇಖರ್‌ರೆಡ್ಡಿ, ಮಾಜಿ ಶಾಸಕರಾದ ಸುರೆಶ್‌ಬಾಬು, ಮಾಜಿ ಎಂ.ಪಿ ಸಣ್ಣ ಪಕ್ಕೀರಪ್ಪ, ಹಾಲಿ ಸಂಸದರಾದ ವೈ ದೇವೇಂದ್ರ ಇವರುಗಳಿಗೆ ಧನ್ಯವಾದಗಳನ್ನು ತಿಳಿಸುತ್ತೇನೆ ಮತ್ತು ಈ ಹುದ್ದೆಗೆ ನಾನು ಮತ್ತು ನಮ್ಮ ಪದಾಧಿಕಾರಿಗಳು ನ್ಯಾಯ ಒದಗಿಸಿ ಎ.ಪಿ.ಎಂ.ಸಿ ಲೋಪದೋಷಗಳನ್ನು ಸರಿಪಡಿಸಿ ಅಭಿವೃದ್ಧಿಗೆ ಪ್ರಯತ್ನಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ಶ್ರೀ ಎಂ ಪಂಪನಗೌಡ ಕಾರೆಕಲ್ಲು, ಸದಸ್ಯರಾದ ಕೆ ಬಾಬು ಕಾರ‍್ಲತೋಟ, ಬಿ ವೆಂಕಟೇಶ್, ಜಿ ತಿರುಮಲರೆಡ್ಡಿ ದಮ್ಮೂರು, ಕೃಷ್ಣಾರೆಡ್ಡಿ ಅವ್ವಂಬಾವಿ, ಶ್ರೀಮತಿ ಸುಜಾತ ಬೆಳಗಲ್ಲು, ಟಿ ಬುಗ್ಗಯ್ಯ ಸಂಗನಕಲ್ಲು, ಜಿ ಹುಲುಗಪ್ಪ ಹೊಸಯರಗುಡಿ, ಎ ರ‍್ರಿಸ್ವಾಮಿ ಬೊಬ್ಬಕುಂಟೆ, ಶ್ರೀಮತಿ ಸುಶೀಲಾಬಾಯಿ ಹೊನ್ನಳ್ಳಿತಾಂಡ, ಮದಿರೆ ಕುಮಾರಸ್ವಾಮಿ, ಶ್ರೀಮತಿ ಪೂಜಾರಿ ಲಕ್ಷಿö್ಮ, ರಾಮಾಂಜಿನಿ ಕಪ್ಪಗಲ್ಲು, ಜಿ ಸೋಮಶೇಖರಗೌಡ ಕುರುಗೋಡು ಹಾಗೂ ಬಿ.ಜೆ.ಪಿ ಮುಖಂಡರಾದ ಪಾಲನ್ನ ಮತ್ತು ಪಕ್ಷದ ಮುಖಂಡರು ಮತ್ತು ಸ್ನೇಹಿತರಾದ ಮೆಡಿಕಲ್ ಶಾಪ್ ಮಲ್ಲಿ, ಬಿ ಮಲ್ಲಿಕಾರ್ಜುನ, ಸತ್ಯಾ, ಶಿವಶಂಕರ್ ಸೇರಿದಂತೆ ಪಕ್ಷದ ಕಾರ್ಯಕರ್ತರು ಇದ್ದರು.
ಕಾಂಡ್ರಾ ಬಾಬು : ಮೊ. ಸಂ ೯೪೪೯೧೩೩೪೨೬

Latest Indian news

Popular Stories